ಕೊರೊನಾದಿಂದ ತತ್ತರಿಸಿ ಹೋಗಿದ್ದ ಕರ್ನಾಟಕಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಕಳೆದ ಒಂದು ತಿಂಗಳಲ್ಲಿ ರಾಜ್ಯ ಸಕ್ರಿಯ ಕೊರೊನಾ ಪ್ರಕರಣದಲ್ಲಿ ಗಣನೀಯ ಇಳಿಮುಖ ಕಂಡಿದೆ.
ಅಕ್ಟೋಬರ್ 29ರ ಲೆಕ್ಕಾಚಾರದ ವೇಳೆಗೆ ಕರ್ನಾಟಕದಲ್ಲಿ 68,180 ಸಕ್ರಿಯ ಪ್ರಕರಣಗಳು ದಾಖಲಾಗಿದ್ದವು. ಆದರೆ ನವೆಂಬರ್ 29ರ ವೇಳೆಗೆ ಈ ಸಂಖ್ಯೆ 24,470ಕ್ಕೆ ಇಳಿಮುಖವಾಗಿದೆ. ಕೇವಲ 30 ದಿನಗಳ ಅಂತರದಲ್ಲಿ 43,410 ಸಕ್ರಿಯ ಪ್ರಕರಣಗಳ ಕುಸಿತವಾಗಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕೊರೊನಾ ಪರೀಕ್ಷೆ ಸಂಖ್ಯೆಯನ್ನ ಜಾಸ್ತಿ ಮಾಡಿದ್ದರು ಈ ಉತ್ತಮ ಬೆಳವಣಿಗೆ ಗೋಚರವಾಗಿದೆ ಎನ್ನಲಾಗ್ತಿದೆ. ಇವಿಷ್ಟು ಕರ್ನಾಟಕದ ಕತೆಯಾದ್ರೆ ಇತ್ತ ಮಹಾರಾಷ್ಟ್ರದಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆ 39 ಸಾವಿರಕ್ಕಿಂತಲೂ ಕಡಿಮೆಯಾಗಿದೆ. ಕೇರಳದಲ್ಲಿ ಸುಮಾರು 28500 , ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಸಾವಿರಕ್ಕಿಂತಲೂ ಇಳಿಮುಖವಾಗಿದೆ. ದಕ್ಷಿಣ ಭಾರತದ ರಾಜ್ಯಗಳು ಕೊರೊನಾ ವೈರಸ್ ಹಿಮ್ಮೆಟ್ಟಿಸಲು ದಾಪುಗಾಲು ಇಡುತ್ತಿವೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.