ಬೆಂಗಳೂರು: ಇನ್ನು ಮುಂದೆ ಡಿಎಲ್ ಮತ್ತು ಚಾಲನಾ ಕಲಿಕಾ ಪರವಾನಿಗೆ(LLR) ಪಡೆದುಕೊಳ್ಳಲು ಸಾರಿಗೆ ಇಲಾಖೆ ಕಚೇರಿಗಳಿಗೆ ಹೋಗಬೇಕಿಲ್ಲ.
ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಇವುಗಳನ್ನು ಪಡೆದುಕೊಳ್ಳಬಹುದಾಗಿದೆ. ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಕುರಿತು ಮಾಹಿತಿ ನೀಡಿ, ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ಎಲ್.ಎಲ್.ಆರ್., ಮತ್ತು ಡಿಎಲ್ ಸೇರಿ ಸಾರಿಗೆ ಇಲಾಖೆ ಸಂಬಂಧಿತ ಕೆಲವು ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎಲ್.ಎಲ್.ಆರ್., ಡಿಎಲ್, ವಾಹನ ನೊಂದಣಿಗೆ ಅರ್ಜಿ ಸಲ್ಲಿಕೆ, ವಾಹನ ನೋಂದಣಿ ಪತ್ರ ಬಿ ಎಕ್ಸ್ ಟ್ರಾಕ್ಟ್ ಪಡೆದುಕೊಳ್ಳುವುದು ಸೇರಿದಂತೆ ಹಲವು ಸೇವೆಗಳನ್ನು ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಸುಮಾರು 24 ಸೇವೆ ಸಕಾಲ ಯೋಜನೆಯಡಿ ನೀಡುತ್ತಿದ್ದು, ಸಾರಥಿ, ವಾಹನ್ ಆಪ್ ಗಳ ಮೂಲಕವೂ ಬಹುತೇಕ ಸೇವೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.