ಬೈಂದೂರು: ಬೃಹತ್ ಹೆಬ್ಬಾವಿನೊಂದಿಗೆ ಹೋರಾಡಿ ನಾಯಿಯನ್ನು ರಕ್ಷಿಸಿದ ಘಟನೆ ತಾಲೂಕಿನ ಗೋಲಿಹೊಳೆಯಲ್ಲಿ ನಡೆದಿದೆ.
ಬೆಂಗಳೂರಿನ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆಯ ರವಿ ಶೆಟ್ಟಿ ಗೋಲಿಹೊಳೆಯಲ್ಲಿರುವ ಅವರ ಫಾರ್ಮ್ ಹೌಸ್ ಗೆ ಆಗಮಿಸಿದ್ದರು. ರಾತ್ರಿ ಮನೆಯ ಬಳಿ ನಾಯಿಯ ಕೂಗು ಕೇಳಿಸಿದೆ. ಹೋಗಿ ನೋಡಿದರೆ ಬರೋಬ್ಬರಿ 20 ಅಡಿಯ 50 ಕೆಜಿ ತೂಕದ ಹೆಬ್ಬಾವು ನಾಯಿಯನ್ನು ಸುತ್ತಿಕೊಂಡಿತ್ತು. ನಾಯಿ ಜೀವಕ್ಕಾಗಿ ಮೊರೆ ಇಡುತ್ತಿತ್ತು.
ಹಾವು ನಾಯಿಯನ್ನು ಆಗಲೇ ನುಂಗಲಾರಂಭಿಸಿತ್ತು. ಅದರ ಬಾಯಿಯಿಂದ ನಾಯಿ ಬಿಡಿಸುವುದು ಸುಲಭದ ಮಾತಾಗಿರಲಿಲ್ಲ. ಇದರಿಂದ ರವಿ ಅರಣ್ಯ ಇಲಾಖೆಯ ತಮ್ಮ ಸ್ನೇಹಿತರಿಗೆ ಕರೆ ಮಾಡಿದ್ದರು. ಬಳಿಕ ಬಂದ ಅರಣ್ಯ ಇಲಾಖೆ ನೌಕರ ಹಾವಿನ ಬಾಯಿಯಿಂದ ನಾಯಿಯನ್ನು ರಕ್ಷಿಸಿ ಹಾವನ್ನು ಕಾಡಿಗೆ ಬಿಟ್ಟಿದ್ದಾರೆ.