ಬಿಗ್ ನ್ಯೂಸ್: ಮುಂದೂಡಲ್ಪಟ್ಟಿದ್ದ FDA ಪರೀಕ್ಷೆಗೆ ಮರು ದಿನಾಂಕ ನಿಗದಿ 02-02-2021 4:11PM IST / No Comments / Posted In: Karnataka, Latest News ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದ ಎಫ್ಡಿಎ ಪರೀಕ್ಷೆಗೆ ಕರ್ನಾಟಕ ಲೋಕಸವಾ ಆಯೋಗ ಮರು ದಿನಾಂಕವನ್ನ ಪ್ರಕಟಿಸಿದೆ. ಫೆಬ್ರವರಿ 28ರಂದು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರೀಕ್ಷೆ ನಡೆಯಲಿದೆ ಎಂದು ಲೋಕಸೇವಾ ಆಯೋಗೆ ಪ್ರಕಟಣೆ ನೀಡಿದೆ. ಈ ಹಿಂದೆ ಜನವರಿ 24ರಂದು ಎಫ್ಡಿಎ ಪರೀಕ್ಷೆ ನಿಗದಿಯಾಗಿತ್ತು. ಎಫ್ಡಿಎ ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಜನವರಿ 24ರಂದು ನಡೆಬೇಕಿದ್ದ ಪರೀಕ್ಷೆಯನ್ನ ರದ್ದು ಮಾಡಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳನ್ನ ಸಿಸಿಬಿ ವಶಕ್ಕೆ ಪಡೆದಿದೆ. ರಾಚಪ್ಪ, ಚಂದ್ರು ಸೇರಿದಂತೆ ಬಂಧಿತರಿಂದ 24 ಲಕ್ಷ ರೂಪಾಯಿ ನಗದು ಹಾಗೂ ಮೂರು ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಪರೀಕ್ಷೆಯ ಮರು ದಿನಾಂಕ ಪ್ರಕಟವಾಗಿದೆ.