
ಕಾರವಾರ: ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಭಾರತೀಯ ನೌಕಾಪಡೆಯ ಕ್ಯಾಪ್ಟನ್ ಮಧುಸೂದನ್ ರೆಡ್ಡಿ ಮೃತಪಟ್ಟಿದ್ದಾರೆ.
ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿನಿಂದ ಶುಕ್ರವಾರ ಬೆಳಗ್ಗೆ ಕಾರವಾರಕ್ಕೆ ಬಂದಿದ್ದ ಆಂಧ್ರಪ್ರದೇಶ ಮೂಲದ ನೌಕಾಪಡೆಯ ಕ್ಯಾಪ್ಟನ್ ಮಧುಸೂದನ್ ರೆಡ್ಡಿ ಅವರು ಸಂಜೆ ಬೀಚ್ ನಲ್ಲಿದ್ದರು. ಪ್ಯಾರಾಗ್ಲೈಡಿಂಗ್ ಹಾರಾಟದಲ್ಲಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ.
ಅರಬ್ಬೀ ಸಮುದ್ರದ ಮೇಲೆ ಹಾರಾಟದಲ್ಲಿದ್ದ ಸಂದರ್ಭದಲ್ಲೇ ಇಂಜಿನ್ ತಾಂತ್ರಿಕ ದೋಷದಿಂದ ಅವರು ಸಮುದ್ರದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.