alex Certify BIG NEWS: ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿದ ಹೈಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿದ ಹೈಕೋರ್ಟ್​

ರಾಜ್ಯದಲ್ಲಿರುವ ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿರುವ ನಿಬಂಧನೆಗಳು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಕರ್ನಾಟಕ ಹೈ ಕೋರ್ಟ್​ ಅಭಿಪ್ರಾಯಪಟ್ಟಿದ್ದು ಈ ಮೂಲಕ ಬಿಜೆಪಿ ಸರ್ಕಾರಕ್ಕೆ ಮುನ್ನಡೆಯಾಗಿದೆ.

ಗೋ ಹತ್ಯೆ ನಿಷೇಧ ಕಾಯ್ದೆಯ ಸಾಂವಿಧಾನಿಕತೆಯನ್ನ ಪ್ರಶ್ನಿಸಿ ಮೊಹಮ್ಮದ್​ ಆರಿಫ್​ ಜಮೀಲ್ ಸೇರಿದಂತೆ ಅನೇಕರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಂಬಂಧ ಹೈಕೋರ್ಟ್​ನಲ್ಲಿ ವಾದ ಮಂಡಿಸಿದ ರಾಜ್ಯ ಸರ್ಕಾರ, ಸಂವಿಧಾನದಲ್ಲಿನ ತತ್ವಗಳಿಗೆ ಅನುಗುಣವಾಗಿಯೇ ಈ ಸುಗ್ರೀವಾಜ್ಞೆ ಇದೆ ಎಂದು ಪ್ರತಿಪಾದಿಸಿದೆ.

2012ರ ಜಾನುವಾರು ಗಣತಿಯಲ್ಲಿ 95,16,484 ರಷ್ಟಿದ್ದ ರಾಸುಗಳ ಸಂಖ್ಯೆ 2019ರ ಗಣತಿಯ ವೇಳೆಗೆ 84,69,004ಕ್ಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಅಂದರೆ ಪ್ರತಿದಿನಕ್ಕೆ ಸರಾಸರಿ 652 ದನಗಳ ಹತ್ಯೆಗೈಯಲಾಗ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮನವರಿಕೆ ಮಾಡಿ ಕೊಟ್ಟಿದೆ.

ಅಲ್ಲದೇ ಮಿರ್ಜಾಪುರ ಪ್ರಕರಣದಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಕೂಡ ಈ ಕಾಯ್ದೆಯನ್ನ ಸಾಂವಿಧಾನಿಕವಾಗಿ ಮಾನ್ಯ ಎಂದು ದೃಢಪಡಿಸಿದೆ ಎಂದೂ ಹೈಕೋರ್ಟ್​ ಮುಂದೆ ರಾಜ್ಯ ಸರ್ಕಾರದ ಪರ ವಕೀಲ ಹೇಳಿದ್ರು. ವಾದ – ಪ್ರತಿವಾದಗಳನ್ನ ಆಲಿಸಿದ ರಾಜ್ಯ ಹೈಕೋರ್ಟ್​ ಗೋ ಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಹೇಳಿದೆ. ಈ ಮೂಲಕ ಸುಗ್ರೀವಾಜ್ಞೆ ಸಂಬಂಧ ರಾಜ್ಯ ಸರ್ಕಾರಕ್ಕೆ ಇದ್ದ ಅಡೆ ತಡೆಗಳಿಗೆ ಹೈಕೋರ್ಟ್​ ತೆರೆ ಎಳೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...