alex Certify ಅನ್ಯಧರ್ಮೀಯ ವಿವಾಹ ವಿರೋಧಿ ಕಾನೂನಿಗೆ ಸರ್ಕಾರದ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ಯಧರ್ಮೀಯ ವಿವಾಹ ವಿರೋಧಿ ಕಾನೂನಿಗೆ ಸರ್ಕಾರದ ಸಿದ್ದತೆ

ಹರಿಯಾಣ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಬಳಿಕ ಇದೀಗ ಕರ್ನಾಟಕ ಕೂಡ ಅನ್ಯಧರ್ಮೀಯ ವಿವಾಹ ವಿರೋಧಿ ಕಾನೂನನ್ನ ತರಲು ಮುಂದಾಗಿದೆ.

ಈ ವಿಚಾರವಾಗಿ ಮಾತನಾಡಿದ ಸಚಿವ ಸಿ.ಟಿ. ರವಿ, ವಿವಾಹ ಉದ್ದೇಶದಿಂದ ಮತಾಂತರವಾಗುವುದನ್ನು ನಿಷೇಧಿಸುವ ಕುರಿತು ಕಾನೂನು ತರಲು ಚಿಂತನೆ ನಡೆಸಿದ್ದೇವೆ . ರಾಜ್ಯದ ಮಹಿಳೆಯರ ಘನತೆಗೆ ಧಕ್ಕೆ ಬಂದರೆ ಅದನ್ನ ನಮ್ಮ ಸರ್ಕಾರ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅನ್ಯಧರ್ಮೀಯ ವಿವಾಹ ಉದ್ದೇಶಕ್ಕೆ ಧರ್ಮಾಂತರ ಮಾಡುವುದನ್ನ ಒಪ್ಪಲಾಗುವುದಿಲ್ಲೆಂದು ಅಲಹಾಬಾದ್​ ಕೋರ್ಟ್​ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ಅಂತರ್​ ಧರ್ಮೀಯ ವಿವಾಹ ವಿರುದ್ಧ ಕಾನೂನು ಜಾರಿ ಮಾಡಲು ಮುಂದಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...