
ವರ ನಟ ಡಾ. ರಾಜ್ ಕುಮಾರ್ ಅವರ ಬೆಂಗಳೂರಿನ ನಿವಾಸದ ವಾಸ್ತುಶಿಲ್ಪ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಎಸ್.ಜಿ. ಶಂಕರಮೂರ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ರಂಗಭೂಮಿ ಕಲಾವಿದರೂ ಆಗಿದ್ದ 68 ವರ್ಷದ ಶಂಕರಮೂರ್ತಿ ನಾಟಕಗಳನ್ನು ರಚಿಸಿ ತಮ್ಮದೇ ನಿರ್ದೇಶನದಲ್ಲಿ ಹಲವೆಡೆ ಪ್ರದರ್ಶನ ನಡೆಸಿದ್ದರು. ಈ ಮೂಲಕ ಬಹಳಷ್ಟು ಕಲಾವಿದರು ಬೆಳಕಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಶಂಕರಮೂರ್ತಿಯವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದು, ಅವರ ನಿಧನಕ್ಕೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.