ರಾಜ್ಯ ಸರ್ಕಾರ ಜಾರಿಗೆ ತಂದಂತಹ ಮೊಬೈಲ್ ಫೀವರ್ ಕ್ಲಿನಿಕ್, ಸ್ತ್ರೀ ಶೌಚಾಲಯಗಳಂತಹ ಜನಸ್ನೇಹಿ ಯೋಜನೆಗಳನ್ನ ಸಮರ್ಪಕವಾಗಿ ನಿರ್ವಹಿಸಿದ ಕೆಎಸ್ಆರ್ಟಿಸಿಗೆ ನ್ಯಾಷನಲ್ ಅವಾರ್ಡ್ ದೊರಕಿದೆ.
ಕೊರೊನಾ ವೈರಸ್ನಂತಹ ಕಠಿಣ ಸಂದರ್ಭದಲ್ಲೂ ಈ ಯೋಜನೆಗಳಿಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಂಡ ಕೆಎಸ್ಆರ್ಟಿಸಿಗೆ ಸಿಎಸ್ಆರ್ ಫಾರ್ ಸೋಷಿಯಲ್ ಡೆವಲಪಿಂಗ್ ಪ್ರಶಸ್ತಿ ಸಂದಿದೆ.
ಪ್ರಶಸ್ತಿ ಸಿಕ್ಕ ವಿಚಾರವಾಗಿ ಮಾತನಾಡಿದ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ, ನಮ್ಮ ಸಿಬ್ಬಂದಿ ಕೊರೊನಾ ವಾರಿಯರ್ಸ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನ ನಮ್ಮ ಸಿಬ್ಬಂದಿಗೆ ಅರ್ಪಿಸುತ್ತಿದ್ದೇನೆ. ಈ ಪ್ರಶಸ್ತಿ ರಾಜ್ಯಕ್ಕೆ ಎದುರಾಗಿರೋ ಇಂತಹ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲೂ ನಾವು ಪಟ್ಟ ಶ್ರಮಕ್ಕೆ ಸಿಕ್ಕ ಗೌರವ ಅಂತಾ ಹೇಳಿದ್ರು.
ಇದೇ ವರ್ಷದ ಮೇ 11ರಂದು ಸಿಎಂ ಬಿಎಸ್ ಯಡಿಯೂರಪ್ಪ ಮೊಬೈಲ್ ಫೀವರ್ ಕ್ಲಿನಿಕ್ನ್ನ ಲೋಕಾರ್ಪಣೆಗೊಳಿಸಿದ್ದರು. ಹಳೆಯ ಬಸ್ಗಳನ್ನ ಆಸ್ಪತ್ರೆಗಳ ರೀತಿಯಲ್ಲಿ ಬದಲಾವಣೆ ಮಾಡಿ ಸ್ವ್ಯಾಬ್ ಟೆಸ್ಟ್ಗಳನ್ನ ಕೈಗೊಳ್ಳಲಾಗುತ್ತಿದೆ.
ಹಳೆಯ ಬಸ್ಗಳನ್ನ ಶೌಚಾಲಯಗಳ ರೀತಿ ಬದಲಾಯಿಸಿ ಅದಕ್ಕೆ ಸ್ತ್ರೀ ಟಾಯ್ಲೆಟ್ ಎಂದು ನಾಮಕರಣ ಮಾಡಿ ಆಗಸ್ಟ್ 27ರಿಂದ ಜನಬಳಕೆಗೆ ಅನುವು ಮಾಡಿಕೊಡಲಾಗಿದೆ. ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ನಲ್ಲಿ ಇರುವ ಈ ಸ್ತ್ರೀ ಟಾಯ್ಲೆಟ್ ಸೋಲಾರ್ ಪವರ್ ಬಳಸಿ ಕಾರ್ಯನಿರ್ವಹಿಸುತ್ತೆ. ಇದರಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೌಚಾಲಯಗಳೆರಡೂ ಇದ್ದು ಇಲ್ಲಿ ಸೆನ್ಸಾರ್ ಲೈಟ್ಗಳನ್ನ ಬಳಕೆ ಮಾಡಲಾಗಿದೆ.