ಹುಲಿ ಹಾಗೂ ಕೃಷ್ಣ ಮೃಗದ ಚರ್ಮವನ್ನ ಇಟ್ಟುಕ್ಕೊಂಡಿದ ಜ್ಯೋತಿಷಿಯನ್ನ ಬಂಧಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಬಂಧಿತ ಆರೋಪಿಯಿಂದ ಪ್ರಾಣಿಗಳ ಚರ್ಮವನ್ನ ವಶಪಡಿಸಿಕೊಳ್ಳಲಾಗಿದೆ.
ಸೂಕ್ತ ಮಾಹಿತಿ ಆಧರಿಸಿ ಜ್ಯೋತಿಷಿ ಮಹೇಶ್ ಹಿರೇಮಠ ನಿವಾಸದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿ ಮಹೇಶ್ ಜಿಲ್ಲೆಯಲ್ಲಿ ಮಾಟ ಮಂತ್ರ ಮಾಡುತ್ತಿದ್ದರು ಅಂತಾ ಹೇಳಲಾಗಿದೆ .
ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಯಾಗಿದ್ದಾರೆ ಎನ್ನಲಾಗಿದ್ದು ನಾಪತ್ತೆಯಾದ ಅಧಿಕಾರಿಗಳಿಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ . ಬಂಧಿತ ಮಹೇಶ್ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆ 1972ರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಳಿವಿನ ಅಂಚಿನಲ್ಲಿರುವ ಕಾಡುಪ್ರಾಣಿಗಳು ಅದರಲ್ಲೂ ಹುಲಿಯ ಚರ್ಮವನ್ನ ಈ ರೀತಿ ಅಕ್ರಮವಾಗಿ ಸಂಗ್ರಹಿಸೋದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಪರಾಧ ಹೇಳಲಾಗುತ್ತೆ. ಆದರೂ ಕೂಡ ಅನೇಕರು ಕಾಡು ಪ್ರಾಣಿಗಳನ್ನ ಬೇಟಿಯಾಡಿ ಅವುಗಳ ಚರ್ಮ, ಹಲ್ಲು ಹಾಗೂ ಕೊಂಬುಗಳನ್ನ ದುಬಾರಿ ಬೆಲೆಗೆ ಮಾರುವ ಅಕ್ರಮ ಕಾರ್ಯ ಎಸಗುತ್ತಿದ್ದಾರೆ.