ಕೊರೊನಾ ವಿಪರೀತವಾಗುತ್ತಿದೆ, ಮಾಸ್ಕ್ ಬಳಕೆ ಕೂಡ ಕಡ್ಡಾಯವಾಗುತ್ತಿದೆ. ಬಳಸಿದ ಮಾಸ್ಕ್ ತ್ಯಾಜ್ಯವಾಗುತ್ತಿದೆ. ಇಲ್ಲೊಬ್ಬ ಕ್ರಿಯಾಶೀಲವಾಗಿ ಚಿಂತಿಸುವ ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮಾಸ್ಕ್‌ಗೆ ಹೊಸ ಆಯಾಮ ನೀಡಿದ್ದಾರೆ.
ಬಳಸಿದ ಮಾಸ್ಕ್ ಮಣ್ಣಿಗೆ ಸೇರಿದರೆ ಸಸ್ಯ ಹುಟ್ಟುವಂತೆ ಕಲ್ಪನೆ ನೀಡಿ ಅಭಿವೃದ್ಧಿಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಕೊರೊನಾ ನೆಗೆಟಿವ್ ಬಂದರೂ ವಿಚಾರಣೆಗೆ ಹಾಜರಾಗದ ರಮೇಶ್ ಜಾರಕಿಹೊಳಿ
ಹೊಸ ರೂಪದ ಮಾಸ್ಕ್ ಉತ್ಪಾದಿಸುತ್ತಿದ್ದು, ಅದರಲ್ಲಿ ಹಣ್ಣು, ತರಕಾರಿ ಬೀಜ ಬಳಸುತ್ತಾರೆ. ಇದರಿಂದ ಬಳಸಿ ಎಸೆದ ಮಾಸ್ಕ್ ಮಣ್ಣಿಗೆ ಸೇರುತ್ತಿದ್ದಂತೆ ಗಿಡ ಹುಟ್ಟುವ ರೀತಿ ರೂಪಿಸಿದ್ದಾರೆ.
ಉದ್ಯಮಿ ಮತ್ತು ಪರಿಸರ ಕಾರ್ಯಕರ್ತ ನಿತಿನ್ ವಾಸ್ ಈ ಸಾಹಸ ಮಾಡಿದ್ದು, ಅವರೇ ಹೇಳುವಂತೆ, ನಾವು ಈ ಕಾಗದದ ಮಾಸ್ಕ್ ವಿನ್ಯಾಸಗೊಳಿಸಿದ್ದೇವೆ. ಮಾಸ್ಕ್ ಮೊದಲ ಪದರವು ಹತ್ತಿಯಿಂದ ಕೂಡಿದೆ ಮತ್ತು ಒಳ ಪದರವು ಹತ್ತಿ ಲೈನಿಂಗ್‌ಗಳಿಂದ ಕೂಡಿದೆ. ಒಮ್ಮೆ ಇವು ಬಳಸಿ ಮಣ್ಣಿನಲ್ಲಿ ಎಸೆಯಲಾಗುತ್ತದೆ, ಬಳಿಕ ಮಾಸ್ಕ್ ಮೇಲೆ ಇರುವ ಬೀಜಗಳಿಂದ ಸಸ್ಯಗಳು ಬೆಳೆಯುತ್ತವೆ ಎಂದು ವಿವರಿಸಿದರು.