ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಬಿಬಿಎಂಪಿ ಜಾಹೀರಾತು ಬೈಲಾಗೆ ತಿದ್ದುಪಡಿ ತರಲಾಗುತ್ತಿದ್ದು, ಶೀಘ್ರದಲ್ಲೇ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಮೂಲಕ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ಕಡ್ಡಾಯ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕನ್ನಡಿಗರ ಕ್ಷಮೆ ಕೋರಿದ ಕವಿ ದೊಡ್ಡರಂಗೇಗೌಡ
ನಾಮಫಲಕಗಳಲ್ಲಿ ಶೇ.67ರಷ್ಟು ಕನ್ನಡ, ಶೇ.33ರಷ್ಟು ಇಂಗ್ಲೀಷ್, ಹಿಂದಿ ಅಥವಾ ಇತರೆ ಭಾಷೆ ಬಳಸಬಹುದು. ಅಂಗಡಿ-ಮುಂಗಟ್ಟುಗಳ ನಾಮ ಫಲಕಗಳಲ್ಲಿ ಕೂಡ ಇದು ಕಡ್ಡಾಯವಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರ ಮತ್ತು ರಕ್ಷಣಾ ಇಲಾಖೆಗೆ ಕಳುಹಿಸುವ ಸುತ್ತೋಲೆ ಹೊರತುಪಡಿಸಿ ಬಿಬಿಎಂಪಿಯಿಂದ ಹೊರಡಿಸುವ ಪ್ರತಿಯೊಂದು ಸುತ್ತೋಲೆ ಕನ್ನಡದಲ್ಲೇ ಇರಲಿದೆ. ಒಟ್ಟಾರೆ ಕನ್ನಡ ಕಾಯಕ ವರ್ಷಾಚರಣೆ ಅಂಗವಾಗಿ ಆರಂಭವಾಗಿರುವ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಅಭಿಯಾನದ ಮೂಲಕ ಕೆಲವೇ ದಿನಗಳಲ್ಲಿ ಬೆಂಗಳೂರು ಕನ್ನಡಮಯವಾಗಲಿದೆ ಎಂದು ಹೇಳಿದರು.