BIG NEWS: ನಟ ಧ್ರುವ ಸರ್ಜಾಗೆ ʼಕೊರೊನಾʼ 15-07-2020 3:52PM IST / No Comments / Posted In: Karnataka, Latest News ಇತ್ತೀಚೆಗಷ್ಟೇ ತಮ್ಮ ಸಹೋದರ ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿನಿಂದ ತೀವ್ರವಾಗಿ ನೊಂದಿದ್ದ ನಟ ಧ್ರುವ ಸರ್ಜಾ ಮನೆಯಿಂದ ಹೊರಗೆ ಬಂದಿರಲೇ ಇಲ್ಲ. ಇದರ ಮಧ್ಯೆ ಅವರ ಆರೋಗ್ಯ ಕೊಂಚ ಏರುಪೇರಾದ ಸಂದರ್ಭದಲ್ಲಿ ವೈದ್ಯರ ಬಳಿ ತೋರಿಸಿಕೊಂಡಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಇದೀಗ ಧ್ರುವ ಸರ್ಜಾ ಮತ್ತವರ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದ್ದು, ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಧು ಹೇಳಲಾಗಿದೆ. ಸ್ವತಃ ಧ್ರುವ ಸರ್ಜಾ ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. My wife and I have both been tested positive for COVID-19 with mild symptoms and hence chosen to get ourselves hospitalised. I’m sure we’ll be back all fine! All those who were in close proximity with us please get yourselves tested and remain safe.ಜೈ ಆಂಜನೇಯ 💪🏼 — Dhruva Sarja (@DhruvaSarja) July 15, 2020