ಬಳ್ಳಾರಿ: ಕಂಪ್ಲಿ ಪುರಸಭೆಯ ವ್ಯಾಪ್ತಿಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮದ ವ್ಯಕ್ತಿಗತ ಉದ್ಯಮಶೀಲತೆ ಹಾಗೂ ಸ್ವಸಹಾಯ ಸಂಘಗಳ ಕ್ರೆಡಿಟ್ ಲಿಂಕೇಜ್ ಮತ್ತು ಒಂದು ಗುಂಪಿಗೆ ಸಾಲ ಮತ್ತು ಬಡ್ಡಿ ಸಹಾಯಧನದ ಘಟಕದಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಲ ಮತ್ತು ಬಡ್ಡಿ ಸಹಾಯಧನ ರೂಪದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಬ್ಯಾಂಕ್ ವಿಧಿಸುವ ಶೇ 7 ರ ಮೇಲ್ಪಟ್ಟು ಶೇಕಡವಾರು ಬಡ್ಡಿ ಮೊತ್ತವನ್ನು ಭರಿಸಲಾಗುವುದು.
ಅರ್ಹರು ಪುರಸಭೆ ಕಾರ್ಯಾಲಯದಲ್ಲಿ ಅರ್ಜಿಯನ್ನು ಪಡೆದುಕೊಂಡು ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್‌ಕಾರ್ಡ್, ಯೋಜನಾ ವರದಿ, ಪಾಸ್‌ಪೋರ್ಟ್ ಅಳತೆಯ ಎರಡು ಪೋಟೋಗಳು, ಸ್ವ ಸಹಾಯ ಗುಂಪುಗಳ ಭಾವಚಿತ್ರ, ಗುಂಪಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮತ್ತು ಯೋಜನಾ ವರದಿ ಪ್ರತಿಯನ್ನು ಇದೇ ಜೂನ್ 30 ರೊಳಗಾಗಿ ಅದೇ ಕಚೇರಿಗೆ ಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.