ಬೆಂಗಳೂರು: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ(ಕೆ – ಸೆಟ್) ಸೆಪ್ಟಂಬರ್ 20 ರಂದು ನಡೆಯಲಿದೆ. ಅದೇ ದಿನ ಪೊಲೀಸ್ ಇಲಾಖೆಯ ಪರೀಕ್ಷೆ ನಡೆಯಲಿದ್ದು ಇದರಿಂದಾಗಿ ಎರಡೂ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಗೊಂದಲ ಉಂಟಾಗಿದೆ.
ರಾಜ್ಯ ಸರ್ಕಾರ ಮೈಸೂರು ವಿಶ್ವವಿದ್ಯಾಲಯಕ್ಕೆ ಸೆಪ್ಟಂಬರ್ 20ರಂದು ಕೆ – ಸೆಟ್ ಪರೀಕ್ಷೆ ನಡೆಸಲು ಸುತ್ತೋಲೆ ಕಳಿಸಿದೆ. ನಾಗರಿಕ ಪೊಲೀಸ್ ಹುದ್ದೆಗಳಿಗೆ ಅವತ್ತೇ ಪರೀಕ್ಷೆ ನಿಗದಿಯಾಗಿದ್ದು ಒಂದು ಪರೀಕ್ಷೆಯನ್ನು ಮಾತ್ರ ಬರೆಯಲು ಅವಕಾಶ ಸಿಗಲಿದೆ. ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಕೆ – ಸೆಟ್ ಪರೀಕ್ಷೆ ಹಲವು ಬಾರಿ ಮುಂದೂಡಲಾಗಿದೆ.
ಸೆಪ್ಟಂಬರ್ 30 ಅಥವಾ ಅಕ್ಟೋಬರ್ 6 ರಂದು ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಮೈಸೂರು ವಿವಿ ಕುಲಪತಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಸೆಪ್ಟೆಂಬರ್ 20 ರಂದು ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಕಳಿಸಿದೆ. ಸಿವಿಲ್ ಪೊಲೀಸ್ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ಸೆಪ್ಟೆಂಬರ್ 20 ರಂದೇ ನಡೆಯಲಿದೆ. ಎರಡು ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಗೊಂದಲ ಉಂಟಾಗಿದೆ ಎಂದು ಹೇಳಲಾಗಿದೆ.