ಕೊರೊನಾ ವೈರಸ್ನಿಂದಾಗಿ ಸರಿ ಸುಮಾರು ಒಂದು ವರ್ಷಗಳ ಕಾಲ ಮನೆಯಲ್ಲೇ ಕೂತಿದ್ದಾಯ್ತು. ಇದೀಗ ಕೊರೊನಾಗೆ ಲಸಿಕೆ ಶುರುವಾಗಿದ್ರೂ ಸಹ ದೂರದ ಪ್ರದೇಶಗಳಿಗೆ ಪ್ರವಾಸ ಮಾಡೋದು ಅಂದ್ರೆ ಭಯ ಮಾತ್ರ ಇಂದಿಗೂ ಇದೆ. ಹೀಗಾಗಿ ಜನಸಂದಣಿ ಜಾಸ್ತಿ ಇರದ ಸ್ಥಳಕ್ಕೆ ಜನತೆ ಈಗ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ನೀವೇನಾದರೂ ಪರಿಸರ ಪ್ರಿಯರಾಗಿದ್ದು ಚಾರಣಗಳನ್ನ ಇಷ್ಟಪಡ್ತಾ ಇದ್ದರೆ ನಿಮಗೆ ಉಡುಪಿ ಜಿಲ್ಲೆಯ ಹೆಬ್ರಿ ಗ್ರಾಮದ ಸಮೀಪವಿರುವ ಸೋಮೇಶ್ವರ ವನ್ಯಜೀವಿ ವ್ಯಾಪ್ತಿಯಲ್ಲಿರುವ ಜೋಂಬ್ಲು ತೀರ್ಥ ಹೇಳಿ ಮಾಡಿಸಿದಂತಹ ಸ್ಥಳ.
ವೈವಿಧ್ಯಮಯ ಪರಿಸರದ ‘ದಾಂಡೇಲಿ’
ಉಡುಪಿ ಪಟ್ಟಣದಿಂದ ಸರಿಯಾಗಿ 40 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ಸೀತಾ ನದಿಯಿಂದ ನಿರ್ಮಾಣವಾಗಿದೆ. 20 ಅಡಿ ಎತ್ತರ ಹೊಂದಿರುವ ಈ ಜಲಪಾತ ಸೀತಾ ನದಿಯ ಎರಡು ಜಲಪಾತಗಳಲ್ಲೊಂದು. ಹಾಸನ ಜಿಲ್ಲೆಯ ಕೊಡ್ಲು ತೀರ್ಥ ಹಾಗೂ ಉಡುಪಿಯ ಜೋಂಬ್ಲು ತೀರ್ಥ ಸೀತಾ ನದಿಯಿಂದ ಉಗಮವಾದ ಎರಡು ಜಲಪಾತಗಳಾಗಿವೆ.
ಇಲ್ಲಿ ಜನಸಂದಣಿ ಅಷ್ಟೊಂದೇನು ಇರೋದಿಲ್ಲ. ಹೀಗಾಗಿ ರಜಾ ದಿನಗಳಲ್ಲಿ ಕುಟುಂಬ ಸಮೇತರಾಗಿ ಈ ಸ್ಥಳಕ್ಕೆ ಹೋಗೋದ್ರಿಂದ ನಿಮ್ಮ ಆರೋಗ್ಯಕ್ಕೂ ಯಾವುದೇ ಭಯ ಇರೋದಿಲ್ಲ. ಅಲ್ಲದೇ ನಿಮ್ಮ ಒತ್ತಡದ ಜೀವನಕ್ಕೂ ಕೊಂಚ ಬ್ರೇಕ್ ಸಿಗಲಿದೆ. ಮಳೆಗಾಲದಲ್ಲಿ ಇಲ್ಲಿ ನೀರಿನ ಹರಿವಿನ ಪ್ರಮಾಣ ಜಾಸ್ತಿ ಇರೋದ್ರಿಂದ ಆ ಸಮಯದಲ್ಲಿ ನೀರಿಗೆ ಇಳಿಯುವ ಸಾಹಸ ಮಾಡದೇ ಇರೋದೇ ಒಳ್ಳೆಯದು.