ಯುವಜನತೆಯನ್ನು ಸೆಳೆಯಲು ಕಾಂಗ್ರೆಸ್ ಹೊಸ ಪ್ಲಾನ್ ಮಾಡಿಕೊಂಡಿದೆ. ಹೊಸ ವಿಂಗ್ ಶುರು ಮಾಡಲು ಸಜ್ಜಾಗಿದ್ದು ಆರ್.ಎಸ್.ಎಸ್. ರೀತಿಯಲ್ಲೇ ಜವಾಹರ ಬಾಲ ಮಂಚ್ ಆರಂಭಿಸಲಾಗುವುದು.
10 ರಿಂದ 17 ವರ್ಷದ ಮಕ್ಕಳು ಹೊಸ ವಿಂಗ್ ನ ಟಾರ್ಗೆಟ್ ಆಗಿದ್ದಾರೆ. ದೇಶದ ಐಕ್ಯತೆ ರಾಷ್ಟ್ರಾಭಿಮಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು. ಗಾಂಧೀಜಿ. ನೆಹರು ಸೇರಿ ಹಲವರ ಹೋರಾಟದ ಬಗ್ಗೆ ತಿಳಿವಳಿಕೆ ನೀಡಲಾಗುವುದು.
ಕೇರಳ, ಮಹಾರಾಷ್ಟ್ರ ಮತ್ತು ಪಂಜಾಬ್ ನಲ್ಲಿ ಬಾಲಮಂಚ್ ಗಳ ಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಲಿಯೂ ಬಾಲಮಂಚ್ ಸ್ಥಾಪನೆ ಮಾಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಕ್ಷೇತ್ರವ್ಯಾಪ್ತಿಗಳಲ್ಲಿಯೂ ಸಂಘಟನೆಗೆ ಚಾಲನೆ ನೀಡಲಾಗುವುದು. ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು. ಬೆಳೆಯುವ ವಯಸ್ಸಿನಲ್ಲೆ ಮಕ್ಕಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.