ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಇಂದು ಮಾಸಿಕ ಜನ ಸಂಪರ್ಕ ದಿನವನ್ನು ಆಚರಿಸಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶದ ಮೇರೆಗೆ ಈ ಸಭೆ ನಡೆಯಿತು.
ಮಾಸಿಕ ಜನಸಂಪರ್ಕ ದಿನ ಆಚರಣೆ ಸಂದರ್ಭದಲ್ಲಿ ಮಡಿವಾಳ ಉಪ ವಿಭಾಗದ ಎಸಿಪಿ ಕರಿಬಸವನ ಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ಪಾಟೀಲ್, ರೈಟರ್ ಜಂಪಲಗಿ ಹಾಗೂ ಠಾಣೆ ಸಿಬ್ಬಂದಿ ವರ್ಗ ಹಾಜರಿದ್ದರು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಅವರ ದೂರು, ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಯಿತು. ಅಲ್ಲದೇ ಸಾರ್ವಜನಿಕರು ಯಾವುದೇ ಹಿಂಜರಿಕೆಯಿಲ್ಲದೇ ಠಾಣೆಗೆ ಭೇಟಿ ನೀಡಿ ತಮ್ಮ ದೂರು ದಾಖಲಿಸಬಹುದು ಎಂದು ತಿಳಿಸಲಾಯಿತು.