
ಮಂಗಳೂರು: ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೊದಲಿಗೆ ಜನಾರ್ದನ ಪೂಜಾರಿ ಅವರ ಸೊಸೆಗೆ ಸೋಂಕು ತಗಲಿದ್ದು ನಂತರದಲ್ಲಿ ಅವರ ಪತ್ನಿಗೆ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆದ ಅವರು ಗುಣಮುಖರಾಗುತ್ತಿದ್ದಾರೆ.
ಈಗ ಜನಾರ್ಧನ ಪೂಜಾರಿಯವರಿಗೆ ಸೋಂಕು ತಗಲಿದೆ. ಶನಿವಾರ ಕೋವಿಡ್ ತಪಾಸಣೆ ನಡೆಸಿದ ವೇಳೆ ಪಾಸಿಟಿವ್ ವರದಿ ಬಂದಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.