ಕೊರೊನಾ ಶುರುವಾಗಿ ವರ್ಷಕ್ಕಿಂತ ಹೆಚ್ಚು ಸಮಯ ಕಳೆದಿದೆ. ಇನ್ನೂ ಕೊರೊನಾಕ್ಕೆ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಕೊರೊನಾ ಲಸಿಕೆ ಅಭಿಯಾನ ಎಲ್ಲ ದೇಶಗಳಲ್ಲಿ ನಡೆಯುತ್ತಿದೆ. ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗ್ತಿದೆ. ಈ ಎರಡು ಲಸಿಕೆಯ ಎರಡು ಡೋಸ್ ನೀಡಲಾಗ್ತಿದೆ. ಎರಡು ಡೋಸ್ ಮಧ್ಯೆ ವಾರಗಳ ಅಂತರವಿರುತ್ತದೆ. ಆದ್ರೆ ಇಟಲಿಯಲ್ಲಿ ಯುವತಿಯೊಬ್ಬಳಿಗೆ ಒಂದೇ ಬಾರಿ 6 ಇಂಜೆಕ್ಷನ್ ನೀಡಲಾಗಿದೆ.
23 ವರ್ಷದ ಯುವತಿಗೆ 6 ಡೋಸ್ ಫಿಜರ್-ಬಯೋಟೆಕ್ ಲಸಿಕೆ ನೀಡಲಾಗಿದೆ. ಎಲ್ಲವನ್ನೂ ಒಂದೇ ಸಮಯದಲ್ಲಿ ನೀಡಲಾಗಿದೆ. ನರ್ಸ್ ತಪ್ಪಾಗಿ ಬಾಟಲಿಯಲ್ಲಿರುವ ಎಲ್ಲ ಔಷಧವನ್ನು ಯುವತಿಗೆ ಇಂಜೆಕ್ಟ್ ಮಾಡಿದ್ದಾಳೆ. ಇದು 6 ಲಸಿಕೆಗೆ ಸಮನಾಗಿರುತ್ತದೆ. ಔಷಧಿಯ ಆರು ಡೋಸ್ ಪಡೆದ ನಂತ್ರವೂ ಯುವತಿಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ.
ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಕೊರೊನಾ ಎರಡನೇ ಅಲೆ
ಇಂಜೆಕ್ಷನ್ ನೀಡಿದ ನಂತ್ರ ನರ್ಸ್ ಗೆ ತಪ್ಪಿನ ಅರಿವಾಗಿದೆ. ತಕ್ಷಣ ಯುವತಿಗೆ ಪ್ಯಾರಾಸಟಮೊಲ್ ಹಾಗೂ Fluids ನೀಡಲಾಗಿದೆ. ವೈದ್ಯಕೀಯ ನಿಯಂತ್ರಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಲಸಿಕೆಯನ್ನು 90 ದೇಶಗಳಲ್ಲಿ ನೀಡಲಾಗ್ತಿದೆ. ಶೀಘ್ರದಲ್ಲೇ ಸಿಂಗಾಪುರದಲ್ಲೂ ಲಸಿಕೆ ಉತ್ಪಾದನೆ ನಡೆಯಲಿದೆ.