ಭಾರತೀಯ ಕರೆನ್ಸಿ ರೂಪಾಯಿ. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇವುಗಳನ್ನು ಸರ್ಕಾರಿ ಮುದ್ರಣಾಲಯಗಳಲ್ಲಿ ಮಾತ್ರ ಮುದ್ರಿಸಲಾಗುತ್ತದೆ. ದೇಶಾದ್ಯಂತ ನಾಲ್ಕು ಮುದ್ರಣಾಲಯಗಳಿವೆ. ಕಾಗದಂತೆ ಕಾಣುವ ನೋಟುಗಳ ಮೇಲೆ ಇಡೀ ವ್ಯವಹಾರ ನಿಂತಿದೆ. ಈ ನೋಟುಗಳ ಮುದ್ರಣದ ವೇಳೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಭದ್ರತಾ ವೈಶಿಷ್ಟ್ಯಗಳನ್ನು ಇವು ಹೊಂದಿದೆ. ಪ್ರತಿ ದಿನ ಅತ್ಯಗತ್ಯವಾಗಿರುವ 10, 20, 50, 100, 500 ಮತ್ತು 2 ಸಾವಿರ ರೂಪಾಯಿ ನೋಟುಗಳನ್ನು ಮುದ್ರಿಸಲು ಎಷ್ಟು ವೆಚ್ಚವಾಗುತ್ತದೆ ಗೊತ್ತಾ?
2018-19ರಲ್ಲಿ 2000 ನೋಟುಗಳ ಮುದ್ರಣಕ್ಕೆ ತುಂಬಾ ಕಡಿಮೆ ವೆಚ್ಚವಾಗಿತ್ತು. 2017-18ರಲ್ಲಿ ಖರ್ಚು ಹೆಚ್ಚಾಗಿತ್ತು. 2019 ರಲ್ಲಿ ನೋಟುಗಳನ್ನು ಮುದ್ರಿಸಲು 65 ಪೈಸೆಗಿಂತ ಕಡಿಮೆ ಖರ್ಚು ಮಾಡಲಾಗಿದೆ. 2018 ರಲ್ಲಿ 2000 ರೂಪಾಯಿ ನೋಟು ಮುದ್ರಣದ ವೆಚ್ಚ 4 ರೂಪಾಯಿ 18 ಪೈಸೆ. 2019 ರಲ್ಲಿ ಒಂದು ನೋಟು ಮುದ್ರಣದ ವೆಚ್ಚ 3.53 ರೂಪಾಯಿ. 2000 ರೂಪಾಯಿ ನೋಟು ಮುದ್ರಿಸಲು 3-4 ರೂಪಾಯಿ ಖರ್ಚು ಬರುತ್ತದೆ. 2019-20ರ ಅಂಕಿಅಂಶಗಳ ಪ್ರಕಾರ, ಉಳಿದ ನೋಟುಗಳನ್ನು ಮುದ್ರಿಸಲು ಬೀಳುವ ವೆಚ್ಚದ ವಿವರ ಇಲ್ಲಿದೆ.
BIG BREAKING: ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್..?
500 ರೂಪಾಯಿ ನೋಟು ಮುದ್ರಿಸಲು 2.65 ರೂಪಾಯಿ ವೆಚ್ಚವಾಗುತ್ತದೆ. 200 ರೂಪಾಯಿ ನೋಟಿನ ಮುದ್ರಣಕ್ಕೆ 2.48. ರೂಪಾಯಿ ಖರ್ಚು ಬರುತ್ತದೆ. 100 ರೂಪಾಯಿ ನೋಟಿನ ಮುದ್ರಣಕ್ಕೆ 1.51 ರೂಪಾಯಿ ವೆಚ್ಚವಾಗುತ್ತದೆ. 50 ರೂಪಾಯಿ ನೋಟು ಮುದ್ರಣಕ್ಕೆ 1.22 ರೂಪಾಯಿ ಖರ್ಚು ಬರುತ್ತದೆ. 20 ರೂಪಾಯಿ ನೋಟು ಮುದ್ರಣಕ್ಕೆ 1 ಪೈಸೆ ಖರ್ಚಾಗುತ್ತದೆ. 10 ರೂಪಾಯಿ ನೋಟು ಮುದ್ರಿಸಲು 1.01 ರೂಪಾಯಿ ಖರ್ಚಾಗುತ್ತದೆ. ಹಳೆ ನೋಟುಗಳಿಗಿಂತ ಹೊಸ ನೋಟುಗಳ ಮುದ್ರಣದ ಖರ್ಚು ಕಡಿಮೆ. ಹಳೆಯ 500 ರೂಪಾಯಿ ನೋಟು ಮುದ್ರಿಸಲು 3.09 ರೂಪಾಯಿ ಖರ್ಚಾಗ್ತಿತ್ತು.