ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಕಣದಲ್ಲಿರುವ ಜೋ ಬಿಡೆನ್ರ ಸಲಹೆಗಾರರ ತಂಡದಲ್ಲಿರುವ ವಿವೇಕ್ ಮೂರ್ತಿ ಕರ್ನಾಟಕ ಮೂಲದವರು ಎಂಬ ಖುಷಿ ವಿಚಾರ ಬೆಳಕಿಗೆ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಜಯ ಸಾಧಿಸಿದ್ರೆ ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿರುವ ಮೂರ್ತಿ ಅಮೆರಿಕ ಸರ್ಕಾರದಲ್ಲಿ ಪ್ರಮುಖ ಸ್ಥಾನವನ್ನ ಅಲಂಕರಿಸುವ ಸಾಧ್ಯತೆ ಇದೆ.
ಮಾಜಿ ಯುಎಸ್ ಸರ್ಜನ್ ಆಗಿರುವ ಮೂರ್ತಿ ಬಿಡೆನ್ ಅವರಿಗೆ ಕರೊನಾ ವಿಚಾರವಾಗಿ ಸಲಹೆ ನೀಡುತ್ತಾರಂತೆ. ಬರಾಕ್ ಒಬಾಮಾ ಆಡಳಿತಾವಧಿಯಲ್ಲೂ ಸೇವೆ ಸಲ್ಲಿಸಿದ್ದ ಮೂರ್ತಿ ಮೂಲತಃ ಕರ್ನಾಟಕದ ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಗ್ರಾಮದವರಂತೆ. ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ರಿಗೆ ಸಹಾಯಕರಾಗಿದ್ದ ಹೆಚ್.ಟಿ. ನಾರಾಯಣ ಶೆಟ್ಟಿಯವರ ಮೊಮ್ಮಗನಾಗಿದ್ದಾರೆ. ಅಮೆರಿಕದಲ್ಲಿದ್ದರೂ ಮೂಲ ನೆಲೆಯನ್ನ ಮರೆಯದ ಮೂರ್ತಿ ಹಲವು ಜನೋಪಯೋಗಿ ಕಾರ್ಯಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.
ಅಲ್ಲದೇ ಅಮೆರಿಕ ಅಧ್ಯಕ್ಷ ಸ್ಥಾನದ ವಿಚಾರವಾಗಿಯೂ ಮಾತನಾಡಿರುವ ಅವರು, ಒಬಾಮಾ ಸರ್ಕಾರದ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಏರಲು ಅರ್ಹನಾದ ನಾಯಕ ಅಂತಾ ಹೇಳಿದ್ದಾರೆ.