ವಾಷಿಂಗ್ಟನ್: ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ರಚಿಸಲಿರುವ ಕೋವಿಡ್ ಟಾಸ್ಕ್ ಫೋರ್ಸ್ ಗೆ ಕರ್ನಾಟಕ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ ನೇಮಕವಾಗುವ ಸಾಧ್ಯತೆ ಇದೆ.
ವಿಜ್ಞಾನಿಗಳು, ತಜ್ಞರಿರುವ ಕೋವಿಡ್ ಟಾಸ್ಕ್ ಫೋರ್ಸ್ ರಚನೆ ಮಾಡಿ ದೇಶದ ಕೋವಿಡ್ ಪ್ರಕರಣ ತಗ್ಗಿಸುವುದಾಗಿ ಬಿಡೆನ್ ಅವರು ಅಧ್ಯಕ್ಷ ಚುನಾವಣೆ ಗೆದ್ದ ನಂತರ ಮೊದಲ ಭಾಷಣದಲ್ಲಿ ತಿಳಿಸಿದ್ದಾರೆ.
ಅದರಲ್ಲಿ ಯಾರ್ಯಾರು ಇರಲಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ. ಆದರೆ, ಡಾ.ವಿವೇಕ್, ಬಿಡೆನ್ ಗೆ ಅತಿ ಆಪ್ತರಾಗಿದ್ದು, ಅವರೇ ಟಾಸ್ಕ್ ಫೋರ್ಸ್ ಸಹ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
43 ವರ್ಷದ ಡಾ.ವಿವೇಕ್ ಅವರು ಬ್ರಿಟನ್ ನಲ್ಲಿ ಹುಟ್ಟಿದವರು. ಬರಾಕ್ ಒಬಾಮಾ ಅಮೆರಿಕಾ ಅಧ್ಯಕ್ಷರಾಗಿದ್ದಾಗ 2014 ರಿಂದ ಅವರು ಅಮೆರಿಕಾದ 14 ನೇ ಸರ್ಜನ್ ಜನರಲ್ ಆಗಿದ್ದರು. ಬಿಡೆನ್ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಆರೋಗ್ಯ ಹಾಗೂ ಕೋವಿಡ್ ವಿಷಯದ ಕುರಿತು ಸಲಹಾಕಾರರಾಗಿದ್ದರು.