ದೇಶದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಹೆಚ್ಚಾಗ್ತಿದ್ದಂತೆ ಬೆಡ್, ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಸಾಮಾನ್ಯ ಲಕ್ಷಣವುಳ್ಳ ಕೊರೊನಾ ಸೋಂಕಿತರು ಮನೆಯಲ್ಲಿಯೇ ಕೊರೊನಾ ಗುಣಪಡಿಸಿಕೊಳ್ಳುತ್ತಿದ್ದಾರೆ. ಐದರಲ್ಲಿ ನಾಲ್ವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಮನೆಯಲ್ಲೇ ಕೊರೊನಾ ಗೆಲ್ಲುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಜ್ವರ, ನೆಗಡಿ, ಕೆಮ್ಮು, ಕಫ ಕೊರೊನಾದ ಆರಂಭಿಕ ಲಕ್ಷಣ. ಮೈ-ಕೈ ನೋವು, ತಲೆ ನೋವು, ಅತಿಸಾರ ಇವು ಕೂಡ ಕೊರೊನಾದ ಆರಂಭಿಕ ಲಕ್ಷಣಗಳು. ಕೊರೊನಾ ಆರಂಭಿಕ ಲಕ್ಷಣ ಕಾಣಿಸಿಕೊಳ್ತಿದ್ದಂತೆ ಮೊದಲು ಐಸೋಲೇಷನ್ ಆಗಬೇಕು. ಕೋವಿಡ್ ಪರೀಕ್ಷೆ ಮಾಡಿಸಿ ವರದಿ ಬರುವವರೆಗೆ ಕಾಯುವ ಅಗತ್ಯವಿಲ್ಲ. ಮೊದಲೇ ಒಂದು ಕೋಣೆಯಲ್ಲಿ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿ.
ವರದಿ ಪಾಸಿಟಿವ್ ಬರ್ತಿದ್ದಂತೆ ಜ್ವರವನ್ನು ಪರೀಕ್ಷಿಸುತ್ತಿರಿ. ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ. ಮನೆಯಲ್ಲಿ ಥರ್ಮಾಮೀಟರ್, ಆಕ್ಸಿಜನ್ ಪರೀಕ್ಷೆ ಮಾಡಿಕೊಳ್ಳಲು ಆಕ್ಸಿಮೀಟರ್ ನಿಮ್ಮ ಬಳಿ ಅಗತ್ಯವಾಗಿರಲಿ. ಮನೆಯವರಿಂದ 6 ಮೀಟರ್ ದೂರವಿರಿ. ಒತ್ತಡಕ್ಕೆ ಒಳಗಾಗಬೇಡಿ. ಗಾಳಿಯಾಡುವ ರೂಮಿನಲ್ಲಿ ಪ್ರತ್ಯೇಕವಾಗಿರಿ. ಯಾವುದೇ ಕಾರಣಕ್ಕೂ ಮನೆಯವರ ಜೊತೆ ನಿಮ್ಮ ವಸ್ತು, ಸೋಪ್ ಗಳನ್ನು ಬಳಸಬೇಡಿ. ಮನೆಯಲ್ಲಿ 30 ದಿನಗಳಿಗೆ ಆಗುವಷ್ಟು ಔಷಧಿಗಳಿರಲಿ. ಹ್ಯಾಂಡ್ ಸ್ಯಾನಿಟೈಜರ್ ಬಳಸುತ್ತಿರಿ. 6 ಗಂಟೆಗೊಮ್ಮೆ ಮಾಸ್ಕ್ ಬದಲಿಸುತ್ತಿರಿ. ದಿನದಲ್ಲಿ ಎರಡು ಬಾರಿ ಗಾರ್ಲಿಂಗ್ ಮಾಡಿ.
ದಿನದಲ್ಲಿ ಆರು ಗಂಟೆಗೊಮ್ಮೆ ಆಕ್ಸಿಜನ್ ಪರೀಕ್ಷಿಸಿಕೊಳ್ಳಿ. ಆಕ್ಸಿಜನ್ ಮಟ್ಟ 90ಕ್ಕಿಂತ ಕಡಿಮೆಯಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯ ಇಲಾಖೆ ಪ್ರಕಾರ 10 ದಿನಗಳಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಸಾಮಾನ್ಯವಾಗಿ 3-4 ದಿನಗಳಲ್ಲಿ ಜ್ವರ ಕಡಿಮೆಯಾಗುತ್ತದೆ. ಆದ್ರೆ ಕೊರೊನಾ ನೆಗೆಟಿವ್ ಬರಲು 10 ದಿನ ಬೇಕು. ಹಾಗಾಗಿ 10 ದಿನಗಳ ಕಾಲ ಯಾರ ಸಂಪರ್ಕಕ್ಕೂ ಬರಬೇಡಿ.