ಕೊರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡೆಡ್ಲಿ ಕೊರೋನಾಗೆ ಕನ್ನಡಿಗ ವೈದ್ಯ ಡಾ. ಹೃಷಿಕೇಶ್ ದಾಮ್ಲೆ ಔಷಧ ಕಂಡು ಹಿಡಿದಿದ್ದಾರೆ. ಐಸಿಎಂಆರ್ ಅನುಮತಿ ನೀಡಿದರೆ, ಕೆಲವೇ ದಿನಗಳಲ್ಲಿ ಔಷಧ ಸಿದ್ಧಪಡಿಸಿ ಕೊಡಲಾಗುವುದು ಎನ್ನಲಾಗಿದೆ.
ಕೊರೋನಾಗೆ ಆಯುರ್ವೇದ ಮದ್ದು ಸಿಕ್ಕಿದೆ. ಫರಿದಾಬಾದ್ ಜೈವಿಕತಂತ್ರಜ್ಞಾನ ಪ್ರಯೋಗಾಲಯದಲ್ಲಿ ಆಯುರ್ವೇದ ಔಷಧ ಕೊರೋನಾ ವೈರಸ್ ಕೊಂದಿರುವ ಕುರಿತು ವರದಿಯಾಗಿದೆ. ಬೆಂಗಳೂರು ಮೂಲದ ಸಸ್ಯಾಧಾರಿತ ಔಷಧ ಕಂಪನಿಯ ಔಷಧ ಇದಾಗಿದೆ.
ಕನ್ನಡಿಗರಾದ ಎಂಡಿ ಮತ್ತು ಸಿಇಒ ಡಾ. ಹೃಷಿಕೇಶ್ ದಾಮ್ಲೆ ಕಂಡುಹಿಡಿದಿರುವ ಸಸ್ಯಾಧಾರಿತ ಔಷಧಿ ಕೊರೋನಾ ವೈರಸ್ ನಾಶಪಡಿಸಿದ್ದು ಮಾನವರ ಮೇಲೆ ಪ್ರಯೋಗಕ್ಕೆ ಐಸಿಎಂಆರ್ ಅನುಮತಿ ನೀಡಿದರೆ ಪ್ರಯೋಗದ ಬಳಿಕ ಔಷಧ ಸಿದ್ಧಪಡಿಸಲಾಗುವುದು. ಅವರು ಸುಮಾರು 4 ಸಾವಿರ ವರ್ಷಗಳಿಂದ ನಮ್ಮಲ್ಲೇ ಇರುವ ಸಸ್ಯದಿಂದ ಔಷಧ ಸಿದ್ಧಪಡಿಸಿರುವುದಾಗಿ ಹೇಳಿದ್ದು ಯಾವ ಸಸ್ಯದಿಂದ ಔಷಧ ಸಿದ್ಧಪಡಿಸಡಲಾಗಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಐಸಿಎಂಆರ್ ನಿಗದಿಪಡಿಸಿದ ಪ್ರಯೋಗಾಲಯದಲ್ಲಿ ದಾಮ್ಲೆ ಅವರ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಇದರಿಂದ ಅಡ್ಡ ಪರಿಣಾಮವಿಲ್ಲ. 600 ಸೋಂಕಿತರ ಮೇಲೆ ಇದನ್ನು ಪ್ರಯೋಗಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.