ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯ ಮುಕುಟಕ್ಕೆ ಮತ್ತೊಂದು ಗರಿ ಸೇರಲು ಸಜ್ಜಾಗಿದೆ. ಹೌದು, ಇನ್ನೊಂದು ವರ್ಷದಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ ವಿಶ್ವದ ಅತಿ ಉದ್ದದ ಫ್ಲಾಟ್‌ಫಾರ್ಮ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಇನ್ನೊಂದು ವರ್ಷದಲ್ಲಿ ಹುಬ್ಬಳ್ಳಿಯ ಫ್ಲಾಟ್‌ಫಾರ್ಮ್ ವಿಶ್ವದ ಅತಿ ಉದ್ದದ ಫ್ಲಾಟ್‌ಫಾರ್ಮ್ ಆಗಿ ಹೊರಹೊಮ್ಮಲಿದೆ.
ಈ ಬಗ್ಗೆ ನೈಋತ್ಯ ರೈಲ್ವೇ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ಮಾತನಾಡಿದ್ದು, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಈಗಾಗಲೇ ಐದು ಫ್ಲಾಟ್‌ಫಾರ್ಮ್‌ಗಳಿವೆ. ಇದನ್ನು ಎಂಟಕ್ಕೆ ಏರಿಸಲು ಕಾಮಗಾರಿ ಆರಂಭವಾಗಿದೆ.
ಇದರೊಂದಿಗೆ ಒಂದನೇ ಫ್ಲಾಟ್‌ಫಾರ್ಮ್ ನ್ನು 550 ಮೀಟರ್‌ನಿಂದ 1400ಕ್ಕೆ ಏರಿಸಲಾಗುವುದು. ಸದ್ಯ ಗೋರಖ್‌ಪುರದಲ್ಲಿ 1350 ಮೀಟರ್ ಉದ್ದದ ಫ್ಲಾಟ್‌ಫಾರ್ಮ್ ಮೊದಲ ಸ್ಥಾನದಲ್ಲಿದ್ದು, ಆ ದಾಖಲೆಯನ್ನು ಹುಬ್ಬಳ್ಳಿ ರೈಲು ನಿಲ್ದಾಣ ಮೀರಿಸಲಿದೆ ಎಂದು ತಿಳಿಸಿದ್ದಾರೆ.