alex Certify ಸಿಗದ ಚಿಕಿತ್ಸೆ: ಆಂಬುಲೆನ್ಸ್ ನಲ್ಲೇ ರಾಜಭವನ ಬಳಿಗೆ ರೋಗಿ ಕರೆ ತಂದ ಕುಟುಂಬಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಗದ ಚಿಕಿತ್ಸೆ: ಆಂಬುಲೆನ್ಸ್ ನಲ್ಲೇ ರಾಜಭವನ ಬಳಿಗೆ ರೋಗಿ ಕರೆ ತಂದ ಕುಟುಂಬಸ್ಥರು

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಬೇರೆ ಕಾಯಿಲೆ ಇರುವವರಿಗೆ ಕೂಡ ಚಿಕಿತ್ಸೆ ಸಿಗದಂತಾಗಿದ್ದು, ಅನೇಕ ರೋಗಿಗಳು ಜೀವನ್ಮರಣದ ಮಧ್ಯೆ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದ ಕೊರೊನಾ ಸೋಂಕಿತರೊಬ್ಬರು ಸಿಎಂ ಮನೆ ಬಳಿಗೆ ಬಂದಿದ್ದರು. ಮಗುವನ್ನು ಕಳೆದುಕೊಂಡ ವ್ಯಕ್ತಿ ಸಿಎಂ ಮನೆ ಬಳಿಬಂದು ಪ್ರತಿಭಟನೆ ನಡೆಸಿದ್ದರು. ಇಂದು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ರಾಜಭವನದ ಬಳಿ ಬಂದು ಸಹಾಯ ಕೇಳಿದ್ದಾರೆ.

80 ವರ್ಷದ ವೃದ್ಧನಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು 3 -4 ಆಸ್ಪತ್ರೆಗಳಿಗೆ ಸೇರಿಸಲು ಹೋದರೆ ದಾಖಲಿಸಿಕೊಂಡಿಲ್ಲ. ಇದರಿಂದ ಕಂಗಾಲಾದ ಕುಟುಂಬದವರು ಆಂಬುಲೆನ್ಸ್ ನಲ್ಲಿ ರಾಜ್ಯ ಭವನದ ಬಳಿ ಬಂದು ನೆರವಿಗೆ ಯಾಚಿಸಿದ್ದಾರೆ. ರಾಜಭವನದ ಭದ್ರತಾ ಸಿಬ್ಬಂದಿ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...