
2021 ರ ರಜೆ ದಿನಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 20 ದಿನ ಸಾರ್ವತ್ರಿಕ ರಜೆ ಇರುತ್ತದೆ. ಭಾನುವಾರ ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತಾಗಿ 20 ದಿನಗಳ ರಜೆ ಘೋಷಣೆ ಮಾಡಲಾಗಿದೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬಂದಿದ್ದು, ಕ್ರಿಸ್ಮಸ್ ನಾಲ್ಕನೇ ಶನಿವಾರ ಬಂದಿದೆ.
ಜನವರಿ 14 ಗುರುವಾರ ಮಕರ ಸಂಕ್ರಾಂತಿ
ಜನವರಿ 26 ಮಂಗಳವಾರ ಗಣರಾಜ್ಯೋತ್ಸವ
ಮಾರ್ಚ್ 11 ಗುರುವಾರ ಮಹಾಶಿವರಾತ್ರಿ
ಏಪ್ರಿಲ್ 2 ಶುಕ್ರವಾರ ಗುಡ್ ಫ್ರೈಡೇ
ಏಪ್ರಿಲ್ 13 ಮಂಗಳವಾರ ಯುಗಾದಿ ಹಬ್ಬ
ಏಪ್ರಿಲ್ 14 ಬುಧವಾರ ಅಂಬೇಡ್ಕರ್ ಜಯಂತಿ
ಮೇ 1 ಶನಿವಾರ ಕಾರ್ಮಿಕ ದಿನಾಚರಣೆ
ಮೇ 14 ಶುಕ್ರವಾರ ಬಸವ ಜಯಂತಿ, ರಂಜಾನ್
ಜುಲೈ 21 ಬುಧವಾರ ಬಕ್ರಿದ್
ಆಗಸ್ಟ್ 20 ಶುಕ್ರವಾರ ಮೊಹರಂ ಕಡೆ ದಿನ
ಸೆಪ್ಟೆಂಬರ್ 10 ಶುಕ್ರವಾರ ವರಸಿದ್ಧಿ ವಿನಾಯಕ ವ್ರತ
ಅಕ್ಟೋಬರ್ 2 ಶನಿವಾರ ಗಾಂಧಿ ಜಯಂತಿ
ಅಕ್ಟೋಬರ್ 6 ಬುಧವಾರ ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 14 ಗುರುವಾರ ಮಹಾನವಮಿ, ಆಯುಧಪೂಜೆ
ಅಕ್ಟೋಬರ್ 15 ಶುಕ್ರವಾರ ವಿಜಯದಶಮಿ
ಅಕ್ಟೋಬರ್ 20 ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ, ಈದ್ ಮಿಲಾದ್
ನವೆಂಬರ್ 1 ಸೋಮವಾರ ಕನ್ನಡ ರಾಜ್ಯೋತ್ಸವ
ನವೆಂಬರ್ 3 ಬುಧವಾರ ನರಕಚತುರ್ದಶಿ
ನವೆಂಬರ್ 5 ಶುಕ್ರವಾರ ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 22 ಸೋಮವಾರ ಕನಕದಾಸ ಜಯಂತಿ ರಜೆ ಇರುತ್ತದೆ
ಈ ರಜೆ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಹಾವೀರ ಜಯಂತಿ ಏಪ್ರಿಲ್ 25, ಸ್ವಾತಂತ್ಯ ದಿನಾಚರಣೆ ಆಗಸ್ಟ್ 15 ಮತ್ತು ನಾಲ್ಕನೇ ಶನಿವಾರ ಬರುವ ಕ್ರಿಸ್ಮಸ್ ಡಿಸೆಂಬರ್ 25 ರಜೆ ದಿನಗಳನ್ನು ಒಳಗೊಂಡಿರುವುದಿಲ್ಲ.
ಸೆಪ್ಟೆಂಬರ್ 3 ರಂದು ಕೈಲ್ ಮುಹೂರ್ತ, ಅಕ್ಟೋಬರ್ 18 ರಂದು ತುಲಾ ಸಂಕ್ರಮಣ, ನವೆಂಬರ್ 20ರಂದು ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿನಗಳಿಗೆ ಮೀರದಂತೆ 2021 ನೇ ವರ್ಷದಲ್ಲಿ ಪರಿಮಿತಿ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆ ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು ಎಂದು ಹೇಳಲಾಗಿದೆ.