ಭಾರತದ ಬಹುಸಂಖ್ಯಾತ ಭಾಷಿಕರಾದ ಹಿಂದಿ ಹಾಗೂ ಬಂಗಾಳಿಗರಲ್ಲಿ ಕೆಲವರು ದ್ವಿಭಾಷಿಕರಾಗಿದ್ದಾರೆ. ಅವರ ಮಾತೃಭಾಷೆ ಇಲ್ಲವೇ ವ್ಯಾವಹಾರಿಕ ಭಾಷೆಯಲ್ಲದೆ, ಕನಿಷ್ಠ ಇನ್ನೊಂದು ಭಾಷೆಯನ್ನು ಬಲ್ಲವರಾಗಿದ್ದಾರೆ.
ಸುಮಾರು ಪ್ರತಿ 15 ಮಿಲಿಯನ್ ಮಂದಿಯ ಮಾತೃಭಾಷೆ ಉರ್ದು ಆಗಿದ್ದರೆ, ಅವರಲ್ಲಿ ಶೇ. 62 ಮಂದಿ ಇನ್ನೊಂದು ಭಾಷೆಯನ್ನು ಅರಿತಿರುತ್ತಾರೆ. ಅದರಲ್ಲೂ ವಿಶಿಷ್ಠವಾಗಿ ಹಿಂದಿಯಲ್ಲಿ ಸರಾಗವಾಗಿ ಮಾತನಾಡುತ್ತಾರೆ.
ಇವರ ನಂತರ ಪಂಜಾಬಿಗಳಿದ್ದು, ಇವರಲ್ಲಿ ಶೇ. 53 ಮಂದಿ ದ್ವಿಭಾಷಿಕರಾಗಿದ್ದಾರೆ. 2011ರ ಜನಗಣತಿ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಇವರು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ಬಲ್ಲವರಾಗಿದ್ದಾರೆ. ಇವರಲ್ಲಿ ಕೆಲವರು ತ್ರಿಭಾಷಿಗಳಾಗಿದ್ದರೆ, ಶೇ. 87 ಮಂದಿ ಇಂಗ್ಲಿಷ್, ಶೇ. 17 ಮಂದಿ ಹಿಂದಿ ಭಾಷೆಯನ್ನು ಅರಿತಿದ್ದಾರೆ.
ಮೂರನೇ ಅತಿದೊಡ್ಡ ದ್ವಿಭಾಷಿಕರಾಗಿ ಮರಾಠಿಗರಿದ್ದು, ಸುಮಾರು 83 ಮಿಲಿಯನ್ ಮರಾಠಿ ಭಾಷಿಕರಲ್ಲಿ ಶೇ. 47 ಮಂದಿ ಇನ್ನೊಂದು ಭಾಷೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರಲ್ಲಿ ಶೇ. 88 ಮಂದಿ ಹೆಚ್ಚಿನದಾಗಿ ಹಿಂದಿಯನ್ನು ಬಲ್ಲವರಾಗಿದ್ದಾರೆ.
ಇನ್ನು ದಕ್ಷಿಣ ಭಾರತ ರಾಜ್ಯಗಳತ್ತ ಹೋಲಿಕೆ ಮಾಡಿದಲ್ಲಿ ಇಲ್ಲಿನವರು ತುಂಬಾ ಕಡಿಮೆ ಮಂದಿ ದ್ವಿಭಾಷಿಕರಾಗಿದ್ದಾರೆ. ಶೇ. 27 ಮಂದಿ ಕನ್ನಡ, ಮಲೆಯಾಳಿಗಳಿದ್ದರೆ, ಶೇ. 25 ಮಂದಿ ತಮಿಳು ಹಾಗೂ ತೆಲುಗು ಭಾಷಿಗರು ಎರಡು ಭಾಷೆಯನ್ನು ಬಲ್ಲವರಿದ್ದಾರೆ.