ಕಾಫಿ ನಾಡು ಚಿಕ್ಕಮಗಳೂರು ತನ್ನ ಮಡಿಲಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳನ್ನ ಐತಿಹಾಸಿಕ ಸ್ಥಳಗಳನ್ನ ಇರಿಸಿಕೊಂಡಿದೆ. ಹೀಗಾಗಿಯೇ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರಿಗೆ ಸೂಕ್ತ ಎನಿಸುವ ಸ್ಥಳ ನಿಮಗೆ ಚಿಕ್ಕಮಗಳೂರಿನಲ್ಲಿ ಸಿಗುತ್ತೆ.
ಈ ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಅಮೃತಾಪುರ ಎಂಬ ಗ್ರಾಮದಲ್ಲಿ ಅಮೃತೇಶ್ವರ ಎಂಬ ದೇವಾಲಯ ತನ್ನ ವಾಸ್ತುಶಿಲ್ಪದ ಮೂಲಕವೇ ಪ್ರವಾಸಿಗರನ್ನ ಸೆಳೆಯುತ್ತೆ. ಇದು ಹೊಯ್ಸಳರ ಕಾಲದ ದೇಗುಲವಾಗಿದೆ.
ಚಿಕ್ಕಮಗಳೂರು ಪಟ್ಟಣದಿಂದ 57 ಕಿಲೋಮೀಟರ್ ದೂರದಲ್ಲಿ ಹಾಗೂ ಹಾಸನದಿಂದ 110 ಕಿಲೋಮೀಟರ್ ದೂರದಲ್ಲಿ ಅಮೃತೇಶ್ವರ ದೇವಸ್ಥಾನ ಸಿಗುತ್ತೆ.
ಅಮೃತೇಶ್ವರ ದೇವಾಲಯವನ್ನ ಕ್ರಿ.ಶ 1196ನೇ ಇಸ್ವಿಯಲ್ಲಿ ದಂಡನಾಯಕ ಅಮೃತೇಶ್ವರ ಹೊಯ್ಸಳ ರಾಜ ವೀರ ಬಲ್ಲಾಳ II ನಿರ್ಮಿಸಿದ್ದಾನೆ.
ಈ ದೇವಾಲಯವನ್ನ ಹೊಯ್ಸಳ ವಾಸ್ತುಶಿಲ್ಪದ ಪ್ರಕಾರ ಕೆತ್ತಲಾಗಿದೆ. ವೃತ್ತಾಕಾರದ ಕೆತ್ತನೆಗಳು ಈ ದೇವಾಲಯದ ವಿಶೇಷ. ಪ್ರಸಿದ್ಧ ವಾಸ್ತು ಶಿಲ್ಪಿ ಮಲ್ಲಿತಮ್ಮ ಇದೇ ದೇವಾಲಯದ ಛಾವಣಿ ಕೆಲಸ ಮಾಡೋ ಮೂಲಕ ವೃತ್ತಿ ಜೀವನ ಆರಂಭಿಸಿದ್ರು ಎಂದು ಹೇಳಲಾಗುತ್ತೆ.
ಈ ದೇವಾಲಯದಲ್ಲಿ 52 ಕಂಬ, 250 ಗೋಪುರವಿದೆ. ನಕ್ಷತ್ರದ ಆಕಾರದಲ್ಲಿ ದೇವಾಲಯವನ್ನ ನಿರ್ಮಾಣ ಮಾಡಲಾಗಿದೆ. ನೇಪಾಳದ ಗಂಡಕಿ ಎಂಬ ನದಿಯಿಂದ ತರಲಾದ ಸಾಲಿಗ್ರಾಮವನ್ನ ಇಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ.
ಇಲ್ಲಿನ ಸಾಲಿಗ್ರಾಮವನ್ನ ಮಕರ ಸಂಕ್ರಾತಿಯಂದು ಪ್ರತಿಷ್ಟಾಪನೆ ಮಾಡಲಾಗಿದೆ. ವಿಶೇಷ ಎಂಬಂತೆ ಪ್ರತಿ ವರ್ಷ ಮಕರ ಸಂಕ್ರಾತಿಯಂದು ಬೆಳಗ್ಗೆ ಸೂರ್ಯನ ಕಿರಣ ಸಾಲಿಗ್ರಾಮದ ಮೇಲೆ ಬೀಳುತ್ತೆ. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಮಕರ ಸಂಕ್ರಾಂತಿಯಂದು ದೇಗುಲಕ್ಕೆ ಧಾವಿಸುತ್ತಾರೆ.