
ದಾವಣಗೆರೆ: ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಡಿ 2020-21 ನೇ ಸಾಲಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಸ್ವಯಂ ಉದ್ಯೋಗ ಕೈಗೊಳ್ಳುಲು ವ್ಯಕ್ತಿಗತ ಉದ್ಯಮಶೀಲತೆ(ಸಾಲ ಮತ್ತು ಸಹಾಯಧನ), ಗುಂಪು ಉದ್ಯಮ ಕಾರ್ಯಕ್ರಮದಡಿ ನೆರವು ನೀಡಲಾಗುವುದು.
ಗುಂಪು ಉದ್ಯಮ ಕೈಗೊಳ್ಳಲು, ಎಸ್.ಹೆಚ್.ಜಿ ಬ್ಯಾಂಕ್ ಕ್ರೆಡಿಟ್ ಲಿಂಕೇಜ್ ಕಾರ್ಯಕ್ರಮದಡಿ ಸಾಲ ಪಡೆಯಲು, ಕೌಶಲ್ಯಾಭಿವೃದ್ದಿ ಸಂಘಗಳನ್ನು ರಚಿಸಲು, ವಿಕಲಚೇತನ ಪುರುಷರ ಸ್ವ ಸಹಾಯ ಸಂಘ ಹಾಗೂ ದುರ್ಬಲ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರು ಸಂಘವನ್ನು ರಚಿಸಲು ಹಾಗೂ ಪ್ರದೇಶ ಮಟ್ಟದ ಮಹಿಳಾ ಒಕ್ಕೂಟವನ್ನು ರಚಿಸಲು ಅರ್ಹ ಫಲಾನುಭವಿಗಳಿಂದ/ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿ ಹೊಂದಿರುವ ಅರ್ಹ ಫಲಾನುಭವಿಗಳಿಂದ ಮತ್ತು ಗುಂಪುಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದು ಭರ್ತಿ ಮಾಡಿದ ಅರ್ಜಿಯೊಂದಿಗೆ ರೇಷನ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ನಿವಾಸಿ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜನ್ಮ ದಿನ ದೃಢೀಕರಣ ಪತ್ರ, ಪಾನ್ ಕಾರ್ಡ್, ಲಗತ್ತಿಸಿ ಅರ್ಜಿಯನ್ನು ದ್ವಿ ಪತ್ರಿಯಲ್ಲಿ ಜು. 4 ರ ಒಳಗೆ ಕಚೇರಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸಂಬಂಧಪಟ್ಟ ಶಾಖೆಯನ್ನು ಸಂಪರ್ಕಿಸಬಹುದೆಂದು ಹರಿಹರ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.