ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿಕೃತಿ ಮೆರೆದ ವ್ಯಕ್ತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಸಿ ಪಾಳ್ಯದ ನಿವಾಸಿ ಸೂರಜ್ ಸಿಂಗ್ ಬೆಂಕಿ ಹಚ್ಚಿದ ಆರೋಪಿ ಎಂದು ಹೇಳಲಾಗಿದೆ. ಮದುವೆಯಾದಾಗಿನಿಂದಲೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಸೂರಜ್ ಸಿಂಗ್ ಪತ್ನಿಯ ತವರು ಮನೆಯಿಂದ ಆಗಾಗ ಹಣ ಪಡೆದುಕೊಳ್ಳುತ್ತಿದ್ದ.
ಮತ್ತೆ ಮತ್ತೆ ಹಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.