ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ, ಅತಿ ಸಣ್ಣ ರೈತರಿಗೆ, ಎಪಿಎಲ್, ಬಿಪಿಎಲ್ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ.
ದನದ ಕೊಟ್ಟಿಗೆ ನಿರ್ಮಾಣಕ್ಕೆ 32 ಸಾವಿರ ರೂ., ಕೊಳವೆಬಾವಿ ಮರುಪೂರಣ ಘಟಕಕ್ಕೆ 20 ಸಾವಿರ ರೂ., ಬಾವಿಗೆ 1.28 ಲಕ್ಷ ರೂ., ಕೃಷಿ ಭೂಮಿ ಸಮತಟ್ಟು ಮಾಡಲು ಒಂದು ಎಕರೆಗೆ 13 ಸಾವಿರ ರೂ., ಇಂಗುಗುಂಡಿ ನಿರ್ಮಾಣಕ್ಕೆ ಮಾದರಿ 1 ಕ್ಕೆ 50 ಸಾವಿರ ರೂ., ಹಾಗೂ ಮಾದರಿ 2 ರ ನಿರ್ಮಾಣಕ್ಕೆ 33 ಸಾವಿರ ರೂ. ಅನುದಾನ ನೀಡಲಾಗುವುದು.
ವಸತಿ ಯೋಜನೆ ಫಲಾನುಭವಿಗಳಿಗೆ ಒಂದು ಮನೆಗೆ 24,750 ರೂ ಅನುದಾನ ನೀಡಲಾಗುತ್ತದೆ. ಅದೇ ರೀತಿ ಬದು ನಿರ್ಮಾಣ, ಕಾಂಪೋಸ್ಟ್ ಗುಂಡಿ, ಕೆರೆ ನಿರ್ಮಾಣ, ಹಿಪ್ಪುನೇರಳೆ ತೋಟದ ನಿರ್ವಹಣೆ, ಸಸಿ ನೆಡುವಿಕೆ, ಶೌಚಾಲಯ ನಿರ್ಮಾಣ, ಕುರಿ ಶೆಡ್ ನಿರ್ಮಾಣ, ಅಡಿಕೆ ಕೃಷಿ, ತೆಂಗು, ಗೇರು, ಕರಿಮೆಣಸು, ಬಾಳೆ ಮೊದಲಾದವುಗಳಿಗಾಗಿ ಯೋಜನೆಯಡಿ ಅನುದಾನ ನೀಡಲಾಗುವುದು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಸಣ್ಣ, ಅತಿ ಸಣ್ಣ ರೈತರು, ಬಿಪಿಎಲ್, ಎಪಿಎಲ್ ಕುಟುಂಬದವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಪಡೆಯಲು ಅವಕಾಶವಿದ್ದು, ಮಾಹಿತಿಗಾಗಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.