alex Certify ಸರ್ಕಾರಿ ನೌಕರರಿಗೆ ನಿರ್ಬಂಧ: ಸಿನಿಮಾ, ಟಿವಿಯಲ್ಲಿ ನಟಿಸುವಂತಿಲ್ಲ, ಕುಟುಂಬದವರೂ ಗಿಫ್ಟ್ ಪಡೆಯುವಂತಿಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ನಿರ್ಬಂಧ: ಸಿನಿಮಾ, ಟಿವಿಯಲ್ಲಿ ನಟಿಸುವಂತಿಲ್ಲ, ಕುಟುಂಬದವರೂ ಗಿಫ್ಟ್ ಪಡೆಯುವಂತಿಲ್ಲ..!

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆ ನಿಯಮ -2020 ಕರಡನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದು, ಇದರ ಅನ್ವಯ ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು ನಿರ್ಬಂಧ ಹೇರಲಾಗಿದೆ.

ಕರಡು ಪ್ರಸ್ತಾಪದಲ್ಲಿ ಸರ್ಕಾರಿ ಸೇವೆಯಲ್ಲಿರುವವರ ಬಗ್ಗೆ ತಿಳಿಸಲಾಗಿದ್ದು, ಇದಕ್ಕಾಗಿ ಸಲಹೆ ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು 15 ದಿನಗಳ ಸಮಯಾವಕಾಶ ನೀಡಲಾಗಿದೆ.

ಅಂತೆಯೇ ಸರ್ಕಾರಿ ನೌಕರರು ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದ ಹೊರತು ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸುವಂತಿಲ್ಲ. ಅಂತಹ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು ಎಂದು ಹೇಳಲಾಗಿದೆ.

ಇದಲ್ಲದೆ ಸರ್ಕಾರಿ ನೌಕರರು ಸಂಬಂಧಿತ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ ಪತ್ರಿಕೆ ಅಥವಾ ನಿಯತಕಾಲಿಕೆಗಳ ಸಂಪಾದನೆ, ಪ್ರಕಟಣೆ, ನಿರ್ವಹಣೆಯಲ್ಲಿ ತೊಡಗಿಕೊಳ್ಳಬಾರದು. ರೇಡಿಯೋ, ಟಿವಿ ಸೇರಿದಂತೆ ಯಾವುದೇ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮಗಳಲ್ಲಿ ಮತ್ತು ಸರ್ಕಾರಿ ಮಾಧ್ಯಮದಲ್ಲಿನ ಹೊರಗಿನಿಂದ ನಿರ್ಮಾಣವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಹೇಳಲಾಗಿದೆ.

ಸಾಂದರ್ಭಿಕವಾಗಿ ಸಾಹಿತ್ಯ, ನಾಟಕ, ಪ್ರಬಂಧ, ಕವನ, ಸಣ್ಣಕಥೆ ಕಾದಂಬರಿಗಳನ್ನು ಪೂರ್ವಾನುಮತಿ ಪಡೆಯದೇ ಬರೆಯಲು ಅವಕಾಶವಿದೆ. ಅಂತಹ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಸಮಯ ಮತ್ತು ಸ್ಥಾನವನ್ನು ಬಳಕೆ ಮಾಡಿಕೊಳ್ಳಬಾರದು. ಯಾರ ಮೇಲೆಯೂ ಪ್ರಭಾವ ಬೀರಬಾರದು. ಯಾವುದೇ ಆಕ್ಷೇಪಾರ್ಹ ಬರಹ ಪ್ರಕಟಿಸಬಾರದು. ಸರ್ಕಾರಿ ಕೆಲಸದಲ್ಲಿರುವವರು, ಕುಟುಂಬದವರು ಯಾವುದೇ ಉಡುಗೊರೆ ಪಡೆಯಬಾರದು, ಕೆಲಸದ ವೇಳೆ ಅದ್ದೂರಿ ಆತಿಥ್ಯವನ್ನು ಸ್ವೀಕರಿಸಬಾರದೆಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...