ಬೆಂಗಳೂರು: ಕೊರಾನಾ ಅಟ್ಟಹಾಸ, ಲಾಕ್ ಡೌನ್ ನಡುವೆಯೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ರಾಜಧಾನಿ ಬೆಂಗಳೂರಿನ ವಾಯುಮಾಲಿನ್ಯದಲ್ಲಿ ಭಾರಿ ಇಳಿಕೆಯಾಗಿದ್ದು ವಾತಾವರಣ ತಿಳಿಯಾಗಿದೆ.
ತೆರಿಗೆ ಪಾವತಿದಾರರಿಗೆ ಕೇಂದ್ರದಿಂದ ಮತ್ತೊಂದು ಸಿಹಿ ಸುದ್ದಿ: ಇಲ್ಲಿದೆ ಮಾಹಿತಿ
ಸದಾ ವಾಹನ ದಟ್ಟಣೆ, ಕಟ್ಟಡ ಕಾಮಗಾರಿ, ರಸ್ತೆ ನಿರ್ಮಾಣಗಳ ಧೂಳಿನಿಂದ ಕಂಗೆಟ್ಟಿದ್ದ ಬೆಂಗಳೂರು ನಗರ ಲಾಕ್ ಡೌನ್ ನಡುವೆಯೇ ತಿಳಿಯಾಗಿದ್ದು, ವಾಯುಮಾಲಿನ್ಯ ಶೇ.60ರಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಸುಮಾರು 80 ಲಕ್ಷ ವಾಹನಗಳಿದ್ದು, ಲಾಕ್ ಡೌನ್ ವೇಳೆ ಕೇವಲ 10 ಲಕ್ಷ ಮಾತ್ರ ವಾಹನ ಸಂಚಾರ ಕಂಡುಬಂದಿದೆ.
12ರಿಂದ 15 ವಯಸ್ಸಿನವರಿಗೆ ಫೈಜರ್ ಲಸಿಕೆ ನೀಡಲು ಅನುಮತಿ
ವಾಯುಮಾಲಿನ್ಯ 110 AQI ಯಿಂದ ಸಧ್ಯ 60 AQIಗೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಈಗಿರುವ ತಿಳಿ ವಾತಾವರಣವನ್ನು ಲಾಕ್ ಡೌನ್ ತೆರವಾದ ಬಳಿಕವೂ ಕಾಯ್ದುಕೊಳ್ಳುವುದು ಹೇಗೆ ಎಂಬುದು ಸಧ್ಯದ ಪ್ರಶ್ನೆ.