ಯುವತಿಯೊಬ್ಬರು ವಿಶಿಷ್ಟ ದಾಖಲೆ ಮಾಡಿದ್ದಾರೆ. 1 ಕೆಜಿ ಎಳ್ಳು ಎಣಿಸಿ ಸಂಧ್ಯಾಶ್ರೀ ಎಂಬ ಈ ಯುವತಿ ಈಗ ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಹೊಸೂರು ದೊಡ್ಡಿ ಗ್ರಾಮದ ರತ್ನಮ್ಮ ಮತ್ತು ಕುರಿಬೀರ ಹೆಗ್ಗಡೆ ದಂಪತಿ ಪುತ್ರಿಯಾದ ಸಂಧ್ಯಾಶ್ರೀ ಬಿಡದಿಯ ಜ್ಞಾನವಿಕಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಆಹಾರದ ಮಹತ್ವ ಸಾರುವ ಉದ್ದೇಶದಿಂದ ಸಂಧ್ಯಾಶ್ರೀ ಎಳ್ಳು ಎಣಿಸುವ ಕಾರ್ಯ ಕೈಗೊಂಡಿದ್ದು 1ಕೆಜಿಯಲ್ಲಿ 3,78,615 ಎಳ್ಳುಗಳಿವೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಸಂಧ್ಯಾಶ್ರೀ ದೊಡ್ಡ ಗಾತ್ರದ ಮಾಸ್ಕ್ ಹೊಲಿಯುವ ಮೂಲಕ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದರು.