
ಜೀವಮಾನದುದ್ದಕ್ಕೂ ಇರುವ ಪ್ರೇಮಬಾಂಧವ್ಯವನ್ನು ಇಂದಿನ ದಿನಗಳಲ್ಲಿ ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಬಹಳ ಕಡಿಮೆ ಮಂದಿ ಸುದೀರ್ಘಾವಧಿಯವರೆಗೆ ತಮ್ಮ ಜೀವನ ಸಂಗಾತಿಯೊಂದಿಗೆ ಮಧುರ ದಾಂಪತ್ಯ ಜೀವನ ನಡೆಸುವ ಭಾಗ್ಯ ಹೊಂದಿದ್ದಾರೆ.
ಬೆಂಗಳೂರಿನ ಈ ಹಿರಿಯ ದಂಪತಿಗಳು ಕಳೆದ 72 ವರ್ಷಗಳಿಂದ ವೈವಾಹಿಕ ಜೀವನದಲ್ಲಿದ್ದಾರೆ. ಪತಿಗೆ 101 ವರ್ಷ ವಯಸ್ಸಾಗಿದ್ದರೆ ಮಡದಿಗೆ 90 ವರ್ಷ ವಯಸ್ಸು.
’ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಇನ್‌ಸ್ಟಾಗ್ರಾಂ ಪುಟವೊಂದು ಈ ದಂಪತಿಯ ವಿಡಿಯೋ ಮಾಡಿದ್ದು, ಸುದೀರ್ಘಾವಧಿಯ ಸಂತಸದ ದಾಂಪತ್ಯಕ್ಕೆ ಅನುಸರಿಸಬೇಕಾದ ಐದು ಟಿಪ್ಸ್‌ಗಳನ್ನು ಈ ದಂಪತಿ ಕೊಡುವುದನ್ನು ನೀವು ಕೇಳಬಹುದಾಗಿದೆ.
ಅತ್ಯಾಚಾರ ಆರೋಪಿಯನ್ನ ಹಿಡಿದುಕೊಟ್ಟ ಶ್ವಾನ..!
ದಿನದ ಒಂದಾದರೂ ಊಟವನ್ನು ಜೊತೆಯಾಗಿ ಮಾಡುತ್ತಾ ಇರುವುದರಿಂದ ಹಿಡಿದು ಒಂದಷ್ಟು ಸಿಂಪಲ್ ಹಾಗೂ ಸಣ್ಣದಾದ ಕಾರಣಗಳನ್ನು ತಮ್ಮ ಸುದೀರ್ಘಾವಧಿಯ ಪ್ರೇಮಬಾಂಧ್ಯವಕ್ಕೆ ಕೊಡುತ್ತಾರೆ ಈ ಜೋಡಿ.
ಇವರಿಗೆಂದೇ ಇವರ ಮೊಮ್ಮಕ್ಕಳು ಇನ್‌ಸ್ಟಾಗ್ರಾಂನಲ್ಲಿ ’ದಿಡೇಲಿಗ್ರಾಂಡ್‌ಪೇರೆಂಟ್’ ಎಂಬ ಪೇಜ್ ಒಂದನ್ನು ಸೃಷ್ಟಿಸಿಕೊಟ್ಟಿದ್ದಾರೆ.
https://www.instagram.com/p/CNO8iESB1tB/?utm_source=ig_web_copy_link