ಬೆಂಗಳೂರು: ಪತ್ನಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಸ್ನೇಹಿತನನ್ನು ವ್ಯಕ್ತಿಯೊಬ್ಬ ಗೆಳೆಯರೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
34 ವರ್ಷದ ಯೋಗೇಶ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್(32), ಮತ್ತು ಪ್ರಶಾಂತ್(37) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಯೋಗೇಶ್ ಮತ್ತು ಮಹೇಶ್ ಹಾಗೂ ಪ್ರಶಾಂತ್ ಸ್ನೇಹಿತರಾಗಿದ್ದು ಒಂದೇ ಏರಿಯಾದಲ್ಲಿ ವಾಸವಾಗಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಯೋಗೀಶ್ ಮಹೇಶ್ ನ ಪತ್ನಿ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹೇಶ್ ಪಾರ್ಟಿಯ ನೆಪದಲ್ಲಿ ಪರಪ್ಪನ ಅಗ್ರಹಾರದ ಎಪಿಎಸ್ ಲೇಔಟ್ ಬಯಲು ಪ್ರದೇಶದಲ್ಲಿ ಪ್ರಶಾಂತ್ ಜೊತೆಗೆ ಸೇರಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾನೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹೇಶ್ ಹಾಗೂ ಪ್ರಶಾಂತನನ್ನು ಬಂಧಿಸಿದ್ದಾರೆ.