alex Certify ವಿಮಾನ, ರೈಲು, ಬಸ್ ಟಿಕೆಟ್ ರಿಯಾಯಿತಿ : ಹಿರಿಯ ನಾಗರಿಕರ `ಗುರುತಿನ ಚೀಟಿ’ಗಾಗಿ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ, ರೈಲು, ಬಸ್ ಟಿಕೆಟ್ ರಿಯಾಯಿತಿ : ಹಿರಿಯ ನಾಗರಿಕರ `ಗುರುತಿನ ಚೀಟಿ’ಗಾಗಿ ಅರ್ಜಿ ಆಹ್ವಾನ

ಕೊಪ್ಪಳ   : ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ವಿತರಿಸುತ್ತಿದ್ದು, ಈ ಸೌಲಭ್ಯವನ್ನು ಪಡೆಯಲು ಸೇವಾಸಿಂಧು ಆನ್‌ಲೈನ್ ಪೋರ್ಟ್ಲ್  https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು.

ಹಿರಿಯ ನಾಗರಿಕರಿಗೆ ಸೌಲಭ್ಯಗಳು: ಹಿರಿಯ ನಾಗರಿಕರ ಗುರುತಿನ ಚೀಟಿಯಿಂದ ಶೇ.25ರಷ್ಟು ವಿಮಾನ ಟಿಕೇಟ್ ದರ ರಿಯಾಯಿತಿ, ಶೇ.25ರಷ್ಟು ರೈಲ್ವೇ ಟಿಕೇಟ್ ದರ ರಿಯಾಯಿತಿ, ಶೇ.25ರಷ್ಟು ಬಸ್‌ಪಾಸ್ ಮತ್ತು ಬಸ್ ಟಿಕೇಟ್ ದರ ರಿಯಾಯಿತಿ (ಬಿಎಂಟಿಸಿ & ಕೆ.ಎಸ್.ಆರ್.ಟಿ.ಸಿ), ಆದಾಯ ತೆರಿಗೆ ವಿನಾಯಿತಿ. ಹಿರಿಯ ನಾಗರಿಕರ ಪೋಷಣಾ ಭತ್ಯೆ, ಈ ಎಲ್ಲಾ ಸೌಲಭ್ಯಗಳು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಥವಾ ಕಚೇರಿ ದೂರವಾಣಿ ಸಂಖ್ಯೆ: 08539-200460ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...