ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಈ ನಡುವೆ ಅಧ್ಯಯನವೊಂದು ಕರ್ನಾಟಕದಲ್ಲಿ ತಿಂಗಳಾಂತ್ಯದಲ್ಲಿ ಕೊರೊನಾ ಕೇಸ್ ಇನ್ನಷ್ಟು ಜಾಸ್ತಿಯಾಗಲಿದೆ ಎಂಬ ಆಘಾತಕಾರಿ ಮಾಹಿತಿಯೊಂದನ್ನ ಹೊರಹಾಕಿದೆ.
ವಿಶ್ವದ ಎಲ್ಲ ರಾಷ್ಟ್ರದ ತಜ್ಞರು ಸೇರಿ ನಡೆಸುತ್ತಿರೋ ಕೊರೊನಾ ಅಧ್ಯಯನದಲ್ಲಿ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಕರ್ನಾಟಕ ಸದ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ನಿಯಂತ್ರಣವನ್ನೇನೋ ಸಾಧಿಸ್ತಾ ಇದೆ, ಆದರೆ ತಿಂಗಳಾಂತ್ಯದ ವೇಳೆ ಸೋಂಕಿತರ ಸಂಖ್ಯೆ 1,04,537ರಷ್ಟು ಜಾಸ್ತಿಯಾಗಲಿದೆ ಅಂತಾ ಹೇಳಲಾಗ್ತಿದೆ.
ಪ್ರಾಟಿಯನ್ ಟೆಕ್ನಾಲಜಿಯ ಸಿಇಓ ಹಾಗೂ ಚೇರ್ಮನ್ ಸುಬ್ರಹ್ಮಣಿಯನ್ ಶಿವಕುಮಾರ್ ಈ ವಿಚಾರವಾಗಿ ಮಾತನಾಡಿ, ಮುಂದಿನ ಎರಡು ವಾರಗಳಲ್ಲಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಶೇ.20ರಷ್ಟು ಏರಿಕೆಯಾಗಲಿದೆ. ಇದಕ್ಕೆ ಹಬ್ಬದ ಸಂಭ್ರಮವೂ ಕೂಡ ಒಂದು ಕಾರಣ ಅಂತಾ ಹೇಳಿದ್ದಾರೆ.