ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಸರಳವಾಗಿ ಹಬ್ಬ ಆಚರಿಸಲು ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸಲ ಅದ್ದೂರಿ ಹಬ್ಬ ಆಚರಣೆಗೆ ಕಡಿವಾಣ ಹಾಕಲಾಗುವುದು ಎಂದು ಹೇಳಲಾಗಿದೆ.
ಶ್ರಾವಣಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ನಾಗರಪಂಚಮಿ, ಗಣೇಶ ಚತುರ್ಥೀ, ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ, ಹೋಳಿ ಹಬ್ಬ, ದಸರಾ, ದೀಪಾವಳಿ ಸೇರಿದಂತೆ ಹಬ್ಬಗಳ ಆಚರಣೆಗೆ ಈ ಸಲ ಕಡಿವಾಣ ಹಾಕುವ ಸಾಧ್ಯತೆ ಇದೆ.
ಅದ್ದೂರಿಯಾಗಿ ಹಬ್ಬವ ಆಚರಿಸದೇ ಸರಳವಾಗಿ ಮನೆಗಳಲ್ಲಿ ಹಬ್ಬ ಆಚರಿಸಲು ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಹೇಳಲಾಗಿದೆ.