
ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಆಸ್ತಿ ಕೊಡುತ್ತೀಯಾ ಎಂದು ತಂದೆಯೊಂದಿಗೆ ಜಗಳವಾಡುತ್ತಿದ್ದ ಪುತ್ರ ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸರ್.ಎಂ.ವಿ. ನಗರದ ಪನ್ನೀರ್ ಸೆಲ್ವಂ ಕೊಲೆಯಾದ ವ್ಯಕ್ತಿ. ಅವರ ಪುತ್ರ ರಾಜೇಶ್ ಕುಮಾರ್ ತಂದೆಯ ಕೊಲೆಗೆ ಸುಪಾರಿ ನೀಡಿದ್ದ ಆರೋಪ ಕೇಳಿಬಂದಿದೆ. ಆಸ್ತಿಗಾಗಿ ತಂದೆಯೊಂದಿಗೆ ರಾಜೇಶ್ ಕುಮಾರ್ ಜಗಳವಾಡುತ್ತಿದ್ದ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಆಸ್ತಿ ಚಿನ್ನ ಕೊಡುತ್ತೀಯಾ ಎಂದು ತಂದೆಯೊಂದಿಗೆ ಜಗಳವಾಡುತ್ತಿದ್ದ ರಾಜೇಶ್ ನಿವೇಶನ ಖರೀದಿಗೆ ಹಣ ಕೊಡದಿದ್ದಕ್ಕೆ ಸಂಚು ರೂಪಿಸಿದ್ದ.
ಸ್ನೇಹಿತರಿಗೆ 10 ಲಕ್ಷ ರುಪಾಯಿಗೆ ಸುಪಾರಿ ನೀಡಿದ್ದ. ಪನ್ನೀರ್ ಸೆಲ್ವಂ ಅವರನ್ನು ಅಪಹರಿಸಿ ವಿಷದ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.