ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಯನ್ನ ಜಾರಿಗೆ ತರಲು ರಿಲಯನ್ಸ್ ಕಂಪನಿ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಾಂಕೇತಿಕ ಬೆಂಬಲ ನೀಡುವ ಸಲುವಾಗಿ ಮೈಸೂರಿನ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಯೋ ಸಿಮ್ಗಳನ್ನ ತಿರಸ್ಕರಿಸುವ ಮೂಲಕ ಜಿಯೋ ಸಿಮ್ ತಿರಸ್ಕಾರ ಚಳವಳಿ ನಡೆಸಿದ್ದಾರೆ.
ಅಂಬಾನಿ ಹಾಗೂ ಅದಾನಿ ವಿರುದ್ಧ ಧಿಕ್ಕಾರ ಕೂಗಿದ ರೈತರು ಕೇಂದ್ರ ಸರ್ಕಾರ ಇವರ ಮಾತನ್ನ ಕೇಳಿ ಅನ್ನದಾತರ ಮರಣ ಶಾಸನ ಬರೆಯುತ್ತಿದೆ ಅಂತಾ ಆರೋಪಿಸಿದ್ರು. ಇನ್ನು ಪ್ರತಿಭಟನೆಯ ನೇತೃತ್ವ ವಹಿಸಿದ ಕರುಬೂರು ಶಾಂತಕುಮಾರ್, ಪ್ರಧಾನಿ ಮೋದಿ ಅಂಬಾನಿ ಹಾಗೂ ಅದಾನಿಯ ಒತ್ತಡಕ್ಕೆ ಬಾಗಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಸೇರಿದ ಎಲ್ಲಾ ಸಂಸ್ಥೆಗಳನ್ನ ಒಂದೊಂದಾಗೆ ಇವರಿಗೆ ಮಾರಾಟ ಮಾಡ್ತಿದ್ದಾರೆ ಎಂದು ಆರೋಪಿಸಿದ್ರು.
ಇನ್ನು ರೈತರ ಪ್ರತಿಭಟನೆಗೆ ಬಗ್ಗೆ ಅರಿತಿದ್ದ ರಿಲಯನ್ಸ್ ಸಿಬ್ಬಂದಿ ರೈತರು ಮಳಿಗೆಗೆ ಮುತ್ತಿಗೆ ಹಾಕುವ ಭಯ ಹಿನ್ನೆಲೆ ಬೆಳಗ್ಗೆಯಿಂದಲೇ ಮಳಿಗೆ ಕ್ಲೋಸ್ ಮಾಡಿದ್ದರು.