ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಜಮೀನು ಪರಿವರ್ತನೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೈಗಾರಿಕೆ ಉದ್ದೇಶಕ್ಕೆ ಕೃಷಿ ಜಮೀನನ್ನು ರೈತರಿಂದ ಖರೀದಿಸಿ ಪರಿವರ್ತನೆಗಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯಸರ್ಕಾರ ಬಿಡುಗಡೆ ಮಾಡಿದೆ.
ಕೃಷಿ ಜಮೀನು ಖರೀದಿಸಿ ಕೃಷಿಯೇತರ ಉದ್ದೇಶಕ್ಕೆ ಬಳಸುವವರು ಉದ್ಯೋಗಮಿತ್ರ ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ಇದಾದ 15 ದಿನಗಳ ಒಳಗೆ ಜಿಲ್ಲಾಧಿಕಾರಿಗಳಿಗೆ ಉದ್ಯೋಗಮಿತ್ರದಿಂದ ವರದಿ ನೀಡಲಾಗುವುದು.
ಜಿಲ್ಲಾಧಿಕಾರಿ ಜಮೀನಿನ ಬಗ್ಗೆ ಮಾಹಿತಿ ಪಡೆದ ನಂತರ ಲ್ಯಾಂಡ್ ಆಡಿಟ್ ಕಮಿಟಿಯ ಮುಂದೆ ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ. ಹಕ್ಕು ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಬಂಧಿಸಿದ ಜಮೀನಿಗೆ ತಗಲುವ ಭೂ ಪರಿವರ್ತನಾ ಶುಲ್ಕ ಪಾವತಿಸಲು ಕಂಪನಿಗೆ ಆನ್ಲೈನ್ ಪೇಮೆಂಟ್ ಡಿಮ್ಯಾಂಡ್ ನೋಟ್ ಜನರೇಟ್ ಆಗಲಿದೆ. ಬಳಿಕ ಭೂಪರಿವರ್ತನೆ ಆದೇಶವಾಗಲಿದೆ ಎಂದು ಹೇಳಲಾಗಿದೆ.