
ಕಾರವಾರ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಸಹಸ್ರಳ್ಳಿ ಗ್ರಾಮದ ಕೊಂಕಣಕೊಪ್ಪದಲ್ಲಿ ರೈತರೊಬ್ಬರು ತಾವೇ ಸಿದ್ಧಪಡಿಸಿದ ಚಿತೆಗೆ ಅಗ್ನಿಪ್ರವೇಶ ಮಾಡಿ ಪ್ರಾಣ ಬಿಟ್ಟಿದ್ದಾರೆ.
60 ವರ್ಷದ ಕೃಷಿಕ ಶಿವರಾಮಕೃಷ್ಣ ಹೆಗಡೆ ಪ್ರಾಣ ಕಳೆದುಕೊಂಡ ರೈತ. ಕೆಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಎರಡು ವರ್ಷದ ಹಿಂದೆ ಅವರ ಪತ್ನಿ ಅನಾರೋಗ್ಯದಿಂದ ತೀರಿಕೊಂಡಿದ್ದು ಇದರಿಂದ ವೈರಾಗ್ಯ ಹೊಂದಿದ ಶಿವರಾಮಕೃಷ್ಣ ಮಂಗಳವಾರ ರಾತ್ರಿ ಜಮೀನಿನ ಬಳಿ ಕಾಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಟ್ಟಿಗೆ ರಾಶಿ ಹಾಕಿದ್ದು ಚಿತೆಗೆ ಹಚ್ಚಿದ ಬೆಂಕಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.