ಹೊರ ಹೋಗಬೇಕು ಎಂದರೆ ಈಗ ಮಾಸ್ಕ್ ಧರಿಸಬೇಕು. ಆದರೆ, ಕೋವಿಡ್, ಮಾಲಿನ್ಯದಿಂದ ರಕ್ಷಿಸುವ ಮಾಸ್ಕ್ ನಿಂದ ಕೆಲವು ಸಮಸ್ಯೆಗಳೂ ಆಗುತ್ತವೆ. ಮುಖ್ಯವಾಗಿ ಉಸಿರಾಟದ ತೊಂದರೆ ಎಂದು ಹೇಳಬಹುದು. ಕನ್ನಡಕ ಧರಿಸುವವರಿಗೆ ಭಾರಿ ತೊಂದರೆ ಉಂಟಾಗುತ್ತಿದೆ.
ಮೂಗಿನಿಂದ ಹೊರ ಬೀಳುವ ಬಿಸಿ ಉಸಿರು ಕನ್ನಡಕಕ್ಕೆ ಹೋಗಿ ಅದರ ಮೇಲೆ ಆವಿಯಾಗಿ ಕೂತು ಬಿಡುತ್ತದೆ. ಇದರಿಂದ ಪದೇ ಪದೇ ಅದನ್ನು ತೆಗೆದು ಸ್ವಚ್ಛ ಮಾಡಬೇಕಾಗುತ್ತದೆ.
60 ವರ್ಷ ಮೇಲ್ಪಟ್ಟವರಿಗೇಕೆ ‘ಕೊರೊನಾ’ ಲಸಿಕೆ ಎಂದ ಕಾಂಗ್ರೆಸ್ ನಾಯಕ…!
ಈ ಸಮಸ್ಯೆ ಪರಿಹಾರಕ್ಕೆ ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ. ಉಸಿರು ಮೇಲ್ಭಾಗಕ್ಕೆ ಹೋಗದಂತೆ ಮೂಗಿಗೆ ಫಿಟ್ ಆಗುವಂಥ ಮಾಸ್ಕ್ ಧರಿಸಿ. ಇಲ್ಲವೇ ಸರ್ಜಿಕಲ್ ಟೇಪ್ ನಿಂದ ಮಾಸ್ಕ್ ನ್ನು ಮೂಗಿಗೆ ಅಂಟಿಸಿಬಿಡಿ. ಆವಿ ನಿರೋಧಕ ವಿಶೇಷ ಸ್ಪ್ರೇ ಕೂಡ ಬಂದಿದೆ. ಅದನ್ನು ಹೊಡೆದುಕೊಂಡರೆ ಸಮಸ್ಯೆ ಪರಿಹಾರವಾಗುವುದು, ಕನ್ನಡಕಕ್ಕೆ ಆವಿ ತುಂಬಿಕೊಳ್ಳದು.