ಕೊರೊನಾ ಸೋಂಕು ನಿಯಂತ್ರಣದಲ್ಲಿ ಮಾಸ್ಕ್ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾಸ್ಕ್ ಗಳು ಲಭ್ಯವಿದೆ. ಆದ್ರೆ ಕೊರೊನಾ ನಿಯಂತ್ರಣಕ್ಕೆ ಈ ಮಾಸ್ಕ್ ಹಾಕಿಕೊಳ್ಳುವುದು ಮಾತ್ರ ಮುಖ್ಯವಲ್ಲ. ಅದ್ರ ಬಳಕೆ ಬಗ್ಗೆ ತಿಳಿದಿರಬೇಕಾಗುತ್ತದೆ.
ಯಸ್, ಕೊರೊನಾ ಸೋಂಕಿತ ವ್ಯಕ್ತಿಯಿಂದ ರಕ್ಷಣೆ ಪಡೆಯಲು ಮಾಸ್ಕ್ ಬಳಸುತ್ತೇವೆ. ಸೋಂಕಿತ ಕೆಮ್ಮಿದಾಗ ಅಥವಾ ಉಸಿರಾಡಿದಾಗ ವೈರಸ್ ಮಾಸ್ಕ್ ಮೇಲೆ ಬಂದು ಸೇರುವ ಸಾಧ್ಯತೆಯಿದೆ. ಮಾಸ್ಕ್ ಇದ್ದ ಕಾರಣ ವೈರಸ್ ಮೂಗು, ಬಾಯಿಗೆ ಹೋಗುವುದಿಲ್ಲ. ಆದ್ರೆ ಮಾಸ್ಕ್ ಮೇಲೆಯೇ ಕೊರೊನಾ ವೈರಸ್ ಕೆಲ ಗಂಟೆ ಜೀವಿತವಾಗಿರುತ್ತದೆ. ಮಾಸ್ಕ್ ಸರಿಯಾಗಿ ತೆಗೆಯದೆ ಹೋದಲ್ಲಿ ಮಾಸ್ಕ್ ನಲ್ಲಿದ್ದ ವೈರಸ್ ಕೈ ಸೇರಿ ಅದು ದೇಹದೊಳಗೆ ಹೋಗುತ್ತದೆ.
ಮೊದಲು ಕೈಗೆ ಸ್ಯಾನಿಟೈಜರ್ ಮಾಡಿ ಮಾಸ್ಕನ್ನು ತೆಗೆದು ಬಿಸಿ ನೀರಿನಲ್ಲಿ ನೆನೆ ಹಾಕಬೇಕು. ನಂತ್ರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಮಾಸ್ಕ್ ಹೊರ ಭಾಗ ಮುಖ, ಮೂಗಿಗೆ ತಾಗದಂತೆ ನೋಡಿಕೊಳ್ಳಬೇಕು. ಮಾಸ್ಕ್ ತೆಗೆದ ತಕ್ಷಣ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಮಾಸ್ಕ್ ಧರಿಸುವ ವೇಳೆ ತೆಗೆದುಕೊಳ್ಳುವ ಎಚ್ಚರಿಕೆಯನ್ನು ತೆಗೆಯುವಾಗ ತೆಗೆದುಕೊಳ್ಳದೆ ಹೋದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುತ್ತದೆ.