alex Certify ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿಗೆ ಸೇರಿದ್ದು ಎನ್ನಲಾದ ಸಿಡಿ, ರಮೇಶ್​ ರಾಜಕೀಯ ಜೀವನದಲ್ಲೇ ಬಿರುಗಾಳಿ ಎಬ್ಬಿಸಿತ್ತು. ಈ ಸಿಡಿ ವಿವಾದದ ಬಳಿಕ ರಮೇಶ್​ ತಮ್ಮ ಖಾತೆಗೆ ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಜಿಲ್ಲಾ ಉಸ್ತುವಾರಿ ಸ್ಥಾನದಿಂದಲೂ ಕೆಳಗಿಳಿದಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗೆ ಇಳಿದಿದ್ದರೂ ಸಹ ರಮೇಶ್​ ಜಾರಕಿಹೊಳಿ ಖದರ್​ ಕಡಿಮೆಯಾದಂತೆ ಕಾಣುತ್ತಿಲ್ಲ. ಗೋಕಾಕ್​ನ ಗೃಹ ಕಚೇರಿಗೆ ಜಿಲ್ಲಾಧಿಕಾರಿ ಹಾಗೂ ಡಿಹೆಚ್​ಓರನ್ನ ಕರೆಸಿಕೊಂಡ ರಮೇಶ್​ ಮಹತ್ವದ ಸಭೆ ನಡೆಸಿದ್ರು.

ಗೋಕಾಕ್​​ನ ತಮ್ಮ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸೇರಿ ಕೋವಿಡ್​ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಭೆ ಮಾಡಿದ್ದಾರೆ. ಸಭೆಯಲ್ಲಿ ಡಿಸಿ ಎಂ.ಜಿ. ಹಿರೇಮಠ, ಡಿಹೆಚ್ಓ ಎಸ್​.ವಿ. ಮುನ್ಯಾಳ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗಿಯಾದ್ರು.

ಇನ್ನು ಸಭೆ ಮುಗಿದ ಬಳಿಕ ಮಾತನಾಡಿದ ರಮೇಶ್​ ಜಾರಕಿಹೊಳಿ, ಮೊದಲು ಲಸಿಕೆಯನ್ನ ವಿರೋಧಿಸಿದ್ದ ವಿಪಕ್ಷ ನಾಯಕರೇ ಇದೀಗ ಲಸಿಕೆಯನ್ನ ಹಾಕಿಸಿಕೊಳ್ತಿದ್ದಾರೆ. ಲಸಿಕೆ ವಿಚಾರದಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡೋದನ್ನ ನಿಲ್ಲಿಸಿ ಸರ್ಕಾರಕ್ಕೆ ಸಲಹೆ ಸೂಚನೆ ನೀಡಲಿ ಎಂದು ಹೇಳಿದ್ರು. ಇನ್ನು ಇದೇ ವೇಳೆ ಲಾಕ್​ಡೌನ್​ ವಿಚಾರವಾಗಿಯೂ ಮಾತನಾಡಿದ ಅವ್ರು, ಕೊರೊನಾ ಚೈನ್​ ಬ್ರೇಕ್​ ಆಗಬೇಕು ಅಂದರೆ ಲಾಕ್​ಡೌನ್​ ವಿಸ್ತರಣೆಯಾಗೋದು ಒಳ್ಳೇದು ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...