ಲಾಕ್ಡೌನ್ ಅಂತೆ ಲಾಕ್ಡೌನ್, ಬದನೆಕಾಯಿ.. ಸರ್ಕಾರ ಕಾಟಾಚಾರಕ್ಕೆ ಲಾಕ್ಡೌನ್ ಮಾಡ್ತಾ ಇದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ವಿಚಾರದಲ್ಲಿ ಗಂಭೀರತೆ ಕಾಣಿಸುತ್ತಿಲ್ಲ. ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೊರೊನಾ ಸೋಂಕು ತಡೆಯಲು ಲಾಕ್ಡೌನ್ ಜಾರಿ ಮಾಡಿದೆಯೋ ಅಥವಾ ಕೊರೋನಾ ಹರಡಲು ಲಾಕ್ಡೌನ್ ಜಾರಿ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ. ಬೇಜವಾಬ್ದಾರಿಯಿಂದ ನುಣುಚಿಕೊಂಡು ಜನರನ್ನು ಕೋವಿಡ್ ದವಡೆಗೆ ತಳ್ಳಿ ಈಗ ಭಗವಂತನೇ ಕಾಪಾಡಬೇಕು ಎನ್ನುವ ಸರ್ಕಾರ ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ಸುಮ್ಮನೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿ ಎಂದು ಹೇಳಿದ್ದಾರೆ.