ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡ್ರಗ್ಸ್ ಪ್ರಕರಣಕ್ಕೆ ಇದೀಗ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ನಶೆಯ ಅಮಲಲ್ಲಿದ್ದ ಸ್ಯಾಂಡಲ್ ವುಡ್ ನ ತಾರೆಯರಿಗೆ ನಡುಕ ಹುಟ್ಟಿಸಿದೆ.
ಬೆಂಗಳೂರಿನ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಈಗಾಗಲೇ ಇಡಿ ಅಧಿಕಾರಿ ಬಸವರಾಜು ಭೇಟಿ ನೀಡಿದ್ದು, ಡ್ರಗ್ಸ್ ಮಾಫಿಯಾ ಪ್ರಕರಣ ಕುರಿತು ಸಿಸಿಬಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ಕ್ಷಣದವರೆಗೆ ಇಡಿ ಅಧಿಕಾರಿಗಳು ಇಡಿಯಲ್ಲಿ ಇಸಿಐಆರ್ ನ್ನು ದಾಖಲಿಸಿಲ್ಲ. ಆದರೆ ಇಸಿಐಆರ್ ದಾಖಲೆಗೆ ಎಲ್ಲಾ ರೀತಿ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಕಿಂಗ್ ಪಿನ್ ವಿರೇನ್ ಖನ್ನಾರನ್ನು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ವಿಚಾರಣೆ ನಡೆಸುತ್ತಿದ್ದು, ಇದೇ ವೇಳೆ ಇಡಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿರುವುದು ಡ್ರಗ್ಸ್ ನಂಟಿರುವ ನಟಿಮಣಿಯರಿಗೂ ನಡುಕ ಹುಟ್ಟಿಸಿದೆ.